ರಾಮಮಂದಿರಕ್ಕೆ ತೆರಳಿ ಜೈಕಾರ ಹಾಕಿದ ಅಂಕೋಲಾದ ಕ್ಷೌರಿಕ

ಹೊಸದಿಗಂತ ವರದಿ ಅಂಕೋಲಾ:

ಪಟ್ಟಣದಲ್ಲಿ ಕ್ಷೌರಿಕ ವೃತ್ತಿಯಿಂದ ಜೀವನ ನಿರ್ವಹಣೆ ಮಾಡುತ್ತಿರುವ ಅಮದಳ್ಳಿಯ ನಾಗೇಶ ಮಹಾಲೆ ಅವರು ಅಯೋಧ್ಯೆಗೆ ತೆರಳಿ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿ ಜೈ ಶ್ರೀರಾಮ ಘೋಷಣೆ ಕೂಗುವ ಮೂಲಕ ಗಮನ ಸೆಳೆದಿದ್ದಾರೆ.

ಹುಬ್ಬಳ್ಳಿಯಿಂದ ರೈಲ್ವೆ ಮೂಲಕ ವಾರಣಾಸಿಗೆ ತೆರಳಿದ ನಾಗೇಶ ಮಹಾಲೆ ಅಲ್ಲಿಂದ ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ತೆರಳಿ ಶ್ರೀರಾಮಲಲಾ ದರ್ಶನ ಪಡೆದು ದೇವಾಲಯದ ಸುತ್ತ ಮುತ್ತ ಜೈ ಶ್ರೀರಾಮ ಘೋಷಣೆ ಕೂಗತ್ತ ಕುಣಿದು ಕುಪ್ಪಳಿಸಿದ್ದು ಇದು ತಮ್ಮ ಜೀವನದ ಸಾರ್ಥಕ ಕ್ಷಣ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಪುಣ್ಯ ಕ್ಷೇತ್ರ ಕಾಶಿಗೂ ತೆರಳಿದ ಅವರು ಗಂಗಾ ಸ್ನಾನ ಮಾಡಿ ಕಾಶಿ ವಿಶ್ವನಾಥನ ದರ್ಶನ ಪಡೆದು ಪುನೀತರಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಪ್ಪಟ ಅಭಿಮಾನಿ ಎಂದೇ ಗುರುತಿಸಿಕೊಂಡಿರುವ ನಾಗೇಶ ಮಹಾಲೆ ಅವರು ತಮ್ಮ ಕೈ ಮೇಲೆ ಮೋದಿಯವರ ಟ್ಯಾಟೂ ಬರೆಸಿಕೊಂಡಿದ್ದು ಇತ್ತೀಚೆಗೆ ಗುಜರಾತಿಗೆ ತೆರಳಿ ಮೊದಿಯವರು ಜನ್ಮತಾಳಿದ ಮನೆಗೆ ಪೂಜೆ ಸಲ್ಲಿಸಿ ಬಂದಿದ್ದರು.

ತಮ್ಮ ವೃತ್ತಿ ಜೀವನದಲ್ಲೂ ಅಸಹಾಯಕರಿಗೆ,ವಿಕಲಚೇತನರಿಗೆ ಯಾವುದೇ ಹಣ ತೆಗೆದುಕೊಳ್ಳದೇ ಕ್ಷೌರ ಮಾಡುವ ಮೂಲಕ ಸೇವೆ ಸಲ್ಲಿಸುತ್ತಿರುವ ಇವರು ವೈದ್ಯಕೀಯ ಕ್ಷೇತ್ರಕ್ಕೆ ಅನುಕೂಲ ಆಗುವಂತೆ ಮರಣದ ನಂತರ ದೇಹದಾನ ಮಾಡುವುದಾಗಿ ಘೋಷಿಸಿದ್ದಾರೆ.

ನಾಗೇಶ ಮಹಾಲೆ ಅವರು ರಾಮ ಜನ್ಮಭೂಮಿಯಲ್ಲಿ ಜೈ ಶ್ರೀರಾಮ ಘೋಷಣೆ ಕೂಗಿ ಶ್ರೀರಾಮ ಮಂದಿರದ ಪ್ರದಕ್ಷಿಣೆ ಮಾಡಿರುವುದು ಅಂಕೋಲಾ ಸುತ್ತ ಮುತ್ತಲಿನ ಜನರ ಸಂತಸಕ್ಕೆ ಕಾರಣವಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!