ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಈಗಷ್ಟೇ ಬಿಜೆಪಿ ಸೇರಿದ್ದು ಲಕ್ಷ್ಮಣ ಸವದಿ ಕೂಡ ಬಿಜೆಪಿಗೆ ಸೇರುತ್ತಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.
ಈ ಬಗ್ಗೆ ಸವದಿ ಸ್ಪಷ್ಟನೆ ನೀಡಿದ್ದು, ಯಾವ ಕಾರಣಕ್ಕೂ ಬಿಜೆಪಿಗೆ ವಾಪಾಸಾಗೋದಿಲ್ಲ ಎಂದಿದ್ದಾರೆ. ನಾನು ಶೆಟ್ಟರ್ ಒಟ್ಟಿಗೇ ನಿರ್ಧಾರ ಮಾಡಿಲ್ಲ. ಅದು ಅವರ ವೈಯಕ್ತಿಕ ನಿಲುವು, ಇಷ್ಟೆಲ್ಲಾ ಆದಮೇಲೂ ಮತ್ಯಾಕೆ ಹೋದರು ಅನ್ನೋದು ನನಗೂ ಗೊತ್ತಿಲ್ಲ. ಅದಕ್ಕೆ ಅವರೇ ಉತ್ತರಿಸಬೇಕು. ನನ್ನನ್ನು ಬಿಜೆಪಿ ಸಂಪರ್ಕ ಮಾಡಿಲ್ಲ. ಮಾಡಿದ್ರೂ ನಾನು ಹೋಗೋದಿಲ್ಲ ಎಂದಿದ್ದಾರೆ.
ಈಗ ಲೋಕಸಭೆ ಚುನಾವಣೆ ಹತ್ತಿರ ಬಂದಿದೆ, ಅವರಿಗೆ ಅನಿವಾರ್ಯತೆ ಇರೋದಕ್ಕೆ ಶೆಟ್ಟರ್‌ನ್ನು ಮತ್ತೆ ಕರೆದುಕೊಂಡಿದ್ದಾರೆ. ಶೆಟ್ಟರ್ ಬಿಜೆಪಿ ಸೇರಿದ್ದು ದೊಡ್ಡ ಬದಲಾವಣೆ ಆಗೋದಿಲ್ಲ ಯಾಕಂದ್ರೆ ದೊಡ್ಡ ಪಕ್ಷಗಳು ಬ್ಯಾಲೆನ್ಸ್ ಆಗಿರುತ್ತವೆ. ಪಕ್ಷದಿಂದ ಯಾರೇ ಹೋದರೂ ಪಕ್ಷ ಪಕ್ಷವೇ! ಎಂದಿದ್ದಾರೆ.