ಹೃದಯಸ್ಪರ್ಶಿ ವಿಡಿಯೋ: ಯುವತಿಯನ್ನು ಸಂತೈಸಲು ತಾನೂ ತಲೆಬೋಳಿಸಿಕೊಂಡ ಬ್ಯೂಟಿಷಿಯನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬ್ಯೂಟಿಷಿಯನ್ ಒಬ್ಬ ಯುವತಿಗೆ ತಲೆ ಕೂದಲನ್ನು ಬೋಳಿಸಿದ ಬಳಿಕ ಭಾವುಕನಾಗಿ ತಾನೂ ತನ್ನ ತಲೆ ಕೂದಲನ್ನು ಬೋಳಿಸಿಕೊಂಡಿರುವ ಹೃದಯಸ್ಪರ್ಶಿ ವಿಡಿಯೋವೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆರಾಮವಾಗಿ ಸಾಗುತ್ತಿರುವ ಕೆಲವರ ಜೀವನದಲ್ಲಿ ಅನಿರೀಕ್ಷಿತ ತಿರುವುಗಳು ಆಘಾತವನ್ನುಂಟು ಮಾಡುತ್ತವೆ. ಕ್ಯಾನ್ಸರ್ ಪೀಡಿತ ಯುವತಿಯೊಬ್ಬಳು ಚಿಕಿತ್ಸೆಗೆ ಸಿದ್ಧಳಾಗಿದ್ದಾಳೆ. ಈ ಹಿನ್ನೆಲೆಯಲ್ಲಿ ತನ್ನ ಕೂದಲನ್ನು ತೆಗಿಸಲು ಪಾರ್ಲರ್‌ಗೆ ಭೇಟಿ ನೀಡಿದಳು.

ಅಲ್ಲಿ ಬ್ಯೂಟಿಷಿಯನ್‌ ಯುವತಿಯ ಕೂದಲನ್ನು ತೆಗೆಯುತ್ತಿದ್ದಂತೆ ತನ್ನ ಸ್ಥಿತಿ ನೆನೆದು ಕಣ್ಣೀರಾಕಿದ ಯುವತಿಯನ್ನು ನೋಡಿದ ಆ ಯುವಕ ಕೂಡ ಭಾವುಕನಾಗಿ ತನ್ನ ಕೂದಲನ್ನು ಕತ್ತರಿಸಿದ್ದಾನೆ. ಈ ಎಲ್ಲಾ ದೃಶ್ಯಗಳನ್ನು ಯಾರೋ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.ಈ ವಿಡಿಯೋವನ್ನು ಗುಡ್ ನ್ಯೂಸ್ ಮೂವ್‌ಮೆಂಟ್ಸ್ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

ಈ ವಿಡಿಯೋ ಕಂಡು ಯುವಕನ ಕಾರ್ಯಕ್ಕೆ ಭೇಷ್‌ ಎನ್ನುತ್ತಾ..ಬೇಗ ಗುಣಮುಖರಾಗುತ್ತೀರಿ ಚಿಂತಿಸಬೇಡಿ ಎಂಬ ಕಮೆಂಟ್‌ಗಳು ಹರಿದಾಡುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!