ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಏನೆಲ್ಲಾ ನಡೀತಿದೆ, ಆದರೆ ಮೀಡಿಯಾಗೆ ದರ್ಶನ್ ಮಾತ್ರ ಕಾಣ್ತಿರೋದಾ? ಒಂದೇ ಸುದ್ದೀನಾ? ಬೆಳಿಗ್ಗೆ ಎದ್ದರೆ ಟಿವಿಯಲ್ಲಿ ಅದೇ ಬರ್ತಿದೆ. ಅವನೇನು ಸಮಾಜಕ್ಕೆ ರೋಲ್ ಮಾಡೆಲ್ಲ? ಎಂದು ಸಚಿವ ಕೆ.ಎನ್.ರಾಜಣ್ಣ ದರ್ಶನ್ ವಿಚಾರಕ್ಕೆ ಗರಂ ಆಗಿದ್ದಾರೆ.
ದರ್ಶನ್ ಒಳ್ಳೆಯ ಕಲಾವಿದ ಒಪ್ಕೋತಿವಿ, ಅಷ್ಟು ಜನರನನ್ನು ಗಳಿಸಿದ್ದಕ್ಕೆ ಖುಷಿ ಪಡೋಣ ಆದರೆ ಬೆಳಗ್ಗಿಂದ ರಾತ್ರಿವರೆಗೂ ಒಂದೇ ನ್ಯೂಸ್ ತೋರಿಸಿದ್ರೆ ಹೇಗೆ? ವಾಕರಿಕೆ ಬರೋದಿಲ್ಲ. ಏನ್ ಸಾಧನೆ ವಿಷಯ ಅಂತ ತೋರಿಸ್ತಿದ್ದಾರೆ ಎಂದು ಹೇಳಿದ್ದಾರೆ.