ಹೊಸದಿಗಂತ ಡಿಜಿಟಲ್ ಡೆಸ್ಕ್:
ರೊಕ್ಕ ಕೊಟ್ಟರೆ ಯಾವ ಜೈಲಲ್ಲಿ ಏನು ಬೇಕಾದ್ರೂ ಸಿಗತ್ತೆ ಸ್ವಾಮಿ ಎಂದು ಹೇಳಿದ ದರ್ಶನ್ ಅಭಿಮಾನಿಗೆ ಸಂಕಷ್ಟ ಎದುರಾಗಿದೆ.
ಅವರನ್ನು ಬಳ್ಳಾರಿ ಜೈಲಿಗೆ ಹಾಕಬಾರದಿತ್ತು, ನಾವು ದರ್ಶನ್ ಅಭಿಮಾನಿಗಳು, ಅವರನ್ನು ಬೇರೆ ಜೈಲಿಗೆ ಹಾಕಬಹುದಾಗಿತ್ತು. ಬಳ್ಳಾರಿ ಜೈಲಿನಲ್ಲಿ ಊಟ, ಸಾಂಬಾರು ಚೆನ್ನಾಗಿಲ್ಲ, ಏನೂ ಚೆನ್ನಾಗಿಲ್ಲ. ನಾನು ಈ ಜೈಲಿನಲ್ಲಿ ಆರು ವರ್ಷ ಕೈದಿಯಾಗಿದ್ದೆ ಎಂದು ಹೇಳಿದ್ದಾನೆ.
ಜೈಲಿನಲ್ಲಿ ಅಕ್ರಮಗಳು ನಡೆಯುತ್ತವೆಯೇ ಎಂದು ಕೇಳಿದಾಗ ಎಲ್ಲ ನಡೀತಿರ್ತವೆ. ಗಾಂಜಾ, ಬೀಡಿ, ಸಿಗರೇಟು ಎಲ್ಲ ಡಬಲ್ ರೇಟಿಗೆ ಮಾರ್ತಾರೆ. ವಾರ್ಡನ್, ಸೂಪರಿಂಂಟೆಂಡೆಂಟ್, ಜೈಲರ್ ಗಳೇ ಕೈದಿಗಳಿಗೆ ತಂದುಕೊಡುವುದು, ಜೈಲಲ್ಲಿ ರೊಕ್ಕ ಕೊಟ್ಟರೆ ಎಲ್ಲ ಸಿಗ್ತವೆ, ನಂತ್ರ ಕೈದಿಗಳಿಗೆ ಹೊಡೀತಾರೆ. ವಾರಕ್ಕೊಮ್ಮೆ ದುಡ್ಡು ಕೊಡಬೇಕು. ಒಳಗಡೆ ರೌಡಿ ಶೀಟರ್ ಗಳಿರ್ತಾರೆ. ಅವರು ಸೂಪರಿಂಟೆಂಡೆಂಟ್ ಹತ್ತಿರ ತಿಂಗಳಿಗೆ ಇಷ್ಟು ಕೊಡ್ತೀವಿ, ನಮಗೆ ಸ್ವಾತಂತ್ರ್ಯ ಕೊಡು ಎಂದು ಕೇಳ್ತಾರೆ ಹೀಗೆ ಯಾವುದೇ ಅಳುಕಿಲ್ಲದೆ ಮುಕ್ತವಾಗಿ ಮಾತನಾಡಿದ ಮಾಜಿ ಕೈದಿಗೆ ಈಗ ಪೊಲೀಸರು ನೊಟೀಸ್ ಜಾರಿ ಮಾಡಿ ಜೈಲಾಧಿಕಾರಿಗಳನ್ನು ಭೇಟಿ ಮಾಡುವಂತೆ ಸೂಚಿಸಿದ್ದಾರೆ.