ಬಾರ್ಲಿ ಪಾಯಸ ತಿನ್ನಿ ಶಾರೀರಿಕ ಮತ್ತು ಮಾನಸಿಕ ಸಮಸ್ಯೆಗಳಿಂದ ದೂರವಿರಿ! ಮಾಡೋದು ಹೇಗೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೇಕಾಗುವ ಸಾಮಗ್ರಿಗಳು: 

ಬಾರ್ಲಿ-ಅರ್ಧ ಕಪ್‌
ಹಾಲು-ಒಂದು ಲೀಟರ್‌
ಗೋಡಂಬಿ, ಬಾದಾಮಿ, ಖರ್ಜೂರ-ಒಂದು ಕಪ್‌
ಸಕ್ಕರೆ-ರುಚಿಗೆ ತಕ್ಕಷ್ಟು

ಮಾಡುವ ವಿಧಾನ: 

ಅರ್ಧ ಕಪ್ ಬಾರ್ಲಿಯನ್ನು ರಾತ್ರಿ ನೀರಿನಲ್ಲಿ ನೆನೆಸಿಡಬೇಕು. ಮರುದಿನ ಬೆಳಿಗ್ಗೆ ಒಲೆಯ ಮೇಲೆ ಪಾತ್ರೆಯನ್ನಿಟ್ಟು, ಒಂದು ಲೀಟರ್ ಹಾಲು ಹಾಕಿ ಬಿಸಿ ಮಾಡಿ ನೆನೆಸಿದ ಬಾರ್ಲಿಯನ್ನು ಸೇರಿಸಿ. ಸಿಹಿಗಾಗಿ ಸಕ್ಕರೆಯನ್ನು ಬಳಸುವ ಬದಲು ಖರ್ಜೂರವನ್ನು ಬಳಸಿದರೆ ಸಾಕು 15 ನಿಮಿಷ ಮಧ್ಯದಲ್ಲಿ ಕಲಕುತ್ತಾ ಬೇಯಿಸಿ. ಈಗ ಅದಕ್ಕೆ ಗೋಡಂಬಿ, ಬಾದಾಮಿ ಮತ್ತು ಖರ್ಜೂರವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಹಾಕಿ. ಒಲೆಯ ಮೇಲಿನಿಂದ ಒಂದು ನಿಮಿಷದ ನಂತರ ಕೆಳಗಿಳಿಸಿ. ಉತ್ತಮ ಪೋಷಕಾಂಶಗಳಿರುವ ಬಾರ್ಲಿ ಪಾಯಸವನ್ನು ಸೇವಿಸುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!