ಕಾಂತಾರ ನನ್ನ ಸಿನಿಮಾನೇ: ಶೆಟ್ಟರ ಗ್ಯಾಂಗ್ ಅನ್ನು ಹೊಗಳಿದ ಯಶ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾಂತಾರ ವಿಶ್ವದಲ್ಲೇ ಸದ್ದು ಮಾಡುತ್ತಿರುವ ಸಿನಿಮಾ. ಇಂದು ಎಲ್ಲೆಡೆ ತನ್ನದೇ ಛಾಪನ್ನು ಮೂಡಿಸಿದೆ. ‘ಕಾಂತಾರ’ ರಿಲೀಸ್ ಆದ ಎಲ್ಲಾ ಭಾಷೆಯಲ್ಲೂ ಬಾಕ್ಸಾಫೀಸ್‌ ಲೂಟಿ ಮಾಡುತ್ತಿದ್ದು, ಎಲ್ಲೆಡೆ ಚರ್ಚೆಯಾಗುತ್ತಿದೆ.

ಇದರ ನಡುವೆ ‘ಕೆಜಿಎಫ್ 2’ ಅಂತಹ ಬ್ಲಾಕ್‌ ಬಸ್ಟರ್ ಸಿನಿಮಾ ನೀಡಿದ ಬಳಿಕವೂ ಯಶ್ ಸೈಲೆಂಟ್‌ ಆಗಿದ್ದಾರೆ. ಈ ಮಧ್ಯೆ ಯಶ್ ಖಾಸಗಿ ಮಾಧ್ಯಮವೊಂದರ ಸಂವಾದದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಕನ್ನಡ ಚಿತ್ರರಂಗ, ಕಾಂತಾರ ಹಾಗೂ ಕನ್ನಡದ ಸಿನಿಮಾಗಳ ಬಗ್ಗೆಆಡಿದ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ‘ಕಾಂತಾರ’ ಇನ್ನೂ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಲೇ ಇದೆ. ಈ ವೇಳೆ ರಾಕಿಂಗ್ ಸ್ಟಾರ್ ಯಶ್ ಕೂಡ ಈ ಸಿನಿಮಾ ಬಗ್ಗೆನೇ ಮೆಚ್ಚುಗೆ ಸೂಚಿಸಿದ್ದಾರೆ. ಮುಂಬೈನಲ್ಲಿ ಇಂಡಿಯಾ ಟುಡೇ ನ್ಯೂಸ್‌ ಚಾನೆಲ್ ಹಮ್ಮಿಕೊಂಡಿದ್ದ ಸಂವಾದದಲ್ಲಿ ‘ಕಾಂತಾರ’ ಸಿನಿಮಾ ಕೂಡ ನನ್ನದೇ ಸಿನಿಮಾ ಎಂದಿದ್ದಾರೆ. ಯಶ್ ಹೇಳಿದ ಈ ಮಾತೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ನಿರೂಪಕ ಕಾಂತಾರ ನಿಮ್ಮ ಸಿನಿಮಾ ಅಲ್ಲ. ಕನ್ನಡ ಸಿನಿಮಾ ಅದೂ ಕೂಡ ಚೆನ್ನಾಗಿ ಪರ್ಫಾರ್ಮ್ ಮಾಡುತ್ತಿದೆಯಲ್ಲ ಎಂಬ ಅರ್ಥದಲ್ಲಿ ಪ್ರಶ್ನೆ ಮಾಡಿದ್ದರು. ಆ ಪ್ರಶ್ನೆಗೆ ಯಶ್ ತಿರುಗೇಟು ನೀಡಿದ್ದು, ‘ಸರ್ ಕಾಂತಾರ ಕೂಡ ನನ್ನ ಸಿನಿಮಾನೇ.. ನೀವು ನನ್ನ ಸಿನಿಮಾ ಅಲ್ಲ ಅಂತ ಹೇಳಿದ್ರಿ. ಆದರೆ ಅದು ಕೂಡ ನನ್ನ ಸಿನಿಮಾನೇ. ಕಾಂತಾರ ಸಿನಿಮಾ ಕರ್ನಾಟಕದ ಸಿನಿಮಾ. ಇದು ತುಂಬಾನೇ ಚೆನ್ನಾಗಿ ಗಳಿಕೆ ಮಾಡುತ್ತಿದೆ. ಕರ್ನಾಟಕದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಎಲ್ಲಾ ಕಡೆಯಲ್ಲೂ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

‘ಕಾಂತಾರ’ ಬಗ್ಗೆ ಅಷ್ಟೇ ಅಲ್ಲ. ಗರುಡ ಗಮನ ವೃಷಭ ವಾಹನ ಅಂತ ಒಂದು ಸಿನಿಮಾವಿದೆ. ಇದು ಕೂಡ ಕನ್ನಡ ಸಿನಿಮಾ, ‘ಚಾರ್ಲಿ 777’ ಅದೂ ಕೂಡ ನಮ್ಮ ಕನ್ನಡ ಸಿನಿಮಾನೇ. ಎಂದಿದ್ದಾರೆ ರಾಕಿಂಗ್ ಸ್ಟಾರ್ ಯಶ್.

ಇನ್ನು ‘ಕೆಜಿಎಫ್ 2’ ಸಕ್ಸಸ್ ಬಳಿಕ ಯಶ್ ಏನು ಮಾಡುತ್ತಾರೆ ಅನ್ನೋದು ಯಾರಿಗೂ ಗೊತ್ತಿಲ್ಲ. ತಾನು ಹೇಳುವವರೆಗೂ ಯಾವುದೂ ಅಧಿಕೃತವಲ್ಲ ಎಂದು ಯಶ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!