October 15, 2026
Thursday, October 15, 2026
spot_img

ಹೊತ್ತಿ ಉರಿದ ಕೊಟ್ಟಿಗೆ: 12 ಜಾನುವಾರುಗಳು ಸಜೀವ ದಹನ, ಕಣ್ಣೀರಿಟ್ಟ ರೈತ ಕುಟುಂಬ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಧಾರವಾಡದ ಮುಮ್ಮಿಗಟ್ಟಿ ಗ್ರಾಮದಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ಎರಡು ರೈತ ಕುಟುಂಬಗಳಿಗೆ ಸೇರಿದ ಕೊಟ್ಟಿಗೆಗಳು ಹೊತ್ತಿ ಉರಿದು, 12 ಜಾನುವಾರುಗಳು ಸಜೀವ ದಹನಗೊಂಡಿವೆ.

ಬೆಂಕಿಯಲ್ಲಿ ರೈತರ ಆಕಳು, ಎಮ್ಮೆ ಹಾಗೂ ಕರುಗಳು ಸೇರಿ ಒಟ್ಟು 12 ಜಾನುವಾರುಗಳು ಸಾವನ್ನಪ್ಪಿವೆ. ಜೊತೆಗೆ ಎರಡು ಕೊಟ್ಟಿಗೆಗಳು ಮತ್ತು ಮೇವು ಸಂಪೂರ್ಣ ಬೆಂಕಿಗಾಹುತಿಯಾಗಿ ರೈತರಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ.

ಸ್ಥಳಕ್ಕೆ ಅಧಿಕಾರಿಗಳ ಭೇಟಿ

ಘಟನೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.

Must Read