Friday, July 1, 2022

Latest Posts

ಐಶಾರಾಮಿ ಕಾರಲ್ಲಿ ಬರ್ತಾರೆ ಅಂತ ಕಾದವರಿಗೆ ಅಟೋದಲ್ಲಿ ಬಂದು ‘ಶಾಕ್’ ನೀಡಿದ ಸುರೇಶ್‌ಗೋಪಿ!

ಹೊಸ ದಿಗಂತ ಆನ್‌ಲೈನ್ ಡೆಸ್ಕ್:

ದುಬಾರಿ ಕಾರಿನಲ್ಲಿ ಇನ್ನೇನು ಗ್ರ್ಯಾಂಡ್ ಎಂಟ್ರಿ ಕೊಡ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಸಂಘಟಕರಿಗೆ ಅಟೋ ರಿಕ್ಷಾದಲ್ಲಿ ಬಂದಿಳಿದು ನಟ ಸುರೇಶ್ ಗೋಪಿ ಅಚ್ಚರಿ ಮೂಡಿಸಿದ ಘಟನೆ ಎರ್ನಾಕುಳಂನ ಬಿಟಿಎಚ್ ಹೋಟೆಲ್‌ನಲ್ಲಿ  ಹಮ್ಮಿಕೊಂಡಿದ್ದ ವಿಎಚ್ ಪಿ ಸ್ವಾಭಿಮಾನ್ ನಿಧಿ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ನಡೆದಿದೆ.
ಇದಕ್ಕೂ ಮುನ್ನ ಸುರೇಶ್ ಗೋಪಿ, ಕಾಲೂರಿನಲ್ಲಿ ಹಮ್ಮಿಕೊಂಡಿದ್ದ ‘ಅಮ್ಮ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮ ಮುಗಿಯುವಾಗ ಮಧ್ಯಾಹ್ನ ೩ ಗಂಟೆ ಆಗಿತ್ತು.  ಇದೇ ಸಮಯದಲ್ಲಿ ವಿಎಚ್‌ಪಿ ಸ್ವಾಭಿಮಾನ್ ನಿಧಿ ಯೋಜನೆಯ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಕಾರಿನಲ್ಲಿ ಹೊರಟಿದ್ದ ಅವರಿಗೆ  ಕಾಲೂರು ಹಾಗೂ ಎಂ.ಜಿ. ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟುಮಾಡಿತ್ತು. ಹಿಂದೆಮುಂದೆ ನೋಡದ ಅವರು ನೇರ ಅಟೋ ಏರಿ ಉದ್ಘಾಟನಾ ಸಮಾರಂಭಕ್ಕೆ ಹಾಜರಾದರು. ಇನ್ನೊಂದು ಅಚ್ಚರಿಯ ವಿಚಾರವೆಂದರೆ ತನ್ನ ಅಟೋದಲ್ಲಿ ಪ್ರಯಾಣಿಕರಾಗಿದ್ದವರು ಸುರೇಶ್ ಗೋಪಿ ಎಂಬುದು ಅಟೋ ಚಾಲಕನಿಗೂ ತಿಳಿದಿರಲಿಲ್ಲ. ಗೋಪಿ ಅಟೋ ಚಾಲಕನಿಗೂ ಶಾಕ್ ನೀಡಿದ್ದರು!

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss