Tuesday, June 28, 2022

Latest Posts

38 ವರ್ಷದ ಶಿಕ್ಷಕಿಯನ್ನು ವರಿಸಿದ 66 ರ ಮಾಜಿ ಕ್ರಿಕೆಟಿಗ ಅರುಣ್ ಲಾಲ್​!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತದ ಮಾಜಿ ಕ್ರಿಕೆಟಿಗ ಹಾಗೂ ಬೆಂಗಾಲ್ ಕ್ರಿಕೆಟ್​ ತಂಡದ ಕೋಚ್​ ಅರುಣ್ ಲಾಲ್​ ತಮ್ಮ ದೀರ್ಘ ಕಾಲದ ಗೆಳತಿ ಬುಲ್​ಬುಲ್ ಸಾಹಾ ಅವರೊಂದಿಗೆ ವಿವಾಹವಾಗಿದ್ದಾರೆ.
ಇತ್ತೀಚೆಗೆ ನಾವಿಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದು, ಮೇ ಮೊದಲ ವಾರದಲ್ಲಿ ಮದುವೆಯಾಗುತ್ತಿದ್ದೇವೆ ಎಂದು ಹೇಳಿಕೊಂಡಿದ್ದರು.
ಇದೀಗ 66 ವರ್ಷದ ಅರುಣ್​ ಲಾಲ್ ತಮಗಿಂತ 28 ವರ್ಷ ಚಿಕ್ಕವಳಾದ ಬುಲ್​ ಬುಲ್​ ಸಾಹಾ ಅವರನ್ನು ಈ ವಯಸ್ಸಿನಲ್ಲೂ ಪ್ರೀತಿಸಿ ವಿವಾಹವಾಗಿದ್ದಾರೆ.
66 ವರ್ಷದ ಅರುಣ್​ ಲಾಲ್, ವೃತ್ತಿಯಲ್ಲಿ ಶಿಕ್ಷಕಿಯಾಗಿರುವ 38 ವರ್ಷದ ಬುಲ್​ಬುಲ್​ರನ್ನು ವಿವಾಹವಾಗಲು ತಮ್ಮ ಮೊದಲ ಪತ್ನಿ ರೀನಾರ ಒಪ್ಪಿಗೆ ಪಡೆದಿದ್ದಾರೆ. ರೀನಾ ಮತ್ತು ಲಾಲ್​ ಪರಸ್ಪರ ಒಪ್ಪಿಗೆಯ ನಂತರ ವಿಚ್ಛೇದನ ಪಡೆದುಕೊಂಡಿದ್ದಾರೆ.
ಇವರಿಬ್ಬರ ಮದುವೆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ. ಕೋಲ್ಕತ್ತಾದ ಖಾಸಗಿ ಹೋಟೆಲ್​ವೊಂದರಲ್ಲಿ ಇಬ್ಬರು ಮದುವೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss