ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೇರಣೆಯಾಗಿದ್ದರು ನೇತಾಜಿ ʼದತ್ತುತಾಯಿʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ (ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ವಿಶೇಷ)
ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಹೋರಾಡಿದ ಮಹಿಳೆಯರಲ್ಲಿ ಬಸಂತಿ ದೇವಿಯವರು ಪ್ರಮುಖರು .1880 ರ ಮಾರ್ಚ್ 23ರಂದು ಜನಿಸಿದ ಬಸಂತಿದೇವಿಯವರು ತಮ್ಮ 17 ನೇ ವಯಸ್ಸಿನಲ್ಲಿ ರಾಷ್ಟ್ರೀಯವಾದಿ ಚಿತ್ರರಂಜನ್ ದಾಸ್ ಅವರನ್ನು ವಿವಾಹವಾದರು. ಆ ಬಳಿಕ ಸ್ವಾತಂತ್ರ್ಯ ಹೋರಾಟದಲ್ಲಿ ಪತಿಯೊಂದಿಗೆ ಸಕ್ರಿಯವಾಗಿ ತೊಡಗಿಕೊಂಡರು. 1921 ರ ಅಸಹಕಾರ ಚಳುವಳಿಯಲ್ಲಿ ತೊಡಗಿಕೊಂಡಿದ್ದ ಬಸಂತಿ ದೇವಿ ಬ್ರಿಟೀಷರಿಂದ ಬಂಧನಕ್ಕೊಳಗಾದರು.
1921-22 ರ ಅವಧಿಯಲ್ಲಿಅವರು ಬಂಗಾಳ ಕಾಂಗ್ರೆಸ್ ಅಧ್ಯಕ್ಷರ ಹುದ್ದೆಗೆ ಆಯ್ಕೆಯಾದರು. ಪತಿ ಸಿ.ಆರ್.ದಾಸ್ ಮರಣದ ಬಳಿಕ ಅವರು ಹೊರರುತ್ತಿದ್ದ ʼಬ್ಯಾಂಗಲೇರ್ ಕಥಾ ಜರ್ನಲ್ʼ ಜವಾಬ್ದಾರಿಯನ್ನು ಹೊತ್ತುಕೊಂಡರು. ಲಾಲಾ ಲಜಪತ್ ರಾಯ್ ಅವರ ಮೇಲೆ ಬ್ರಿಟೀಷ್ ಪೋಲೀಸರ ದಾಳಿಯ ನಂತರ ಭಾರತೀಯ ಘನತೆ ಕಾಪಾಡಲು ಬ್ರಿಟೀಷರನ್ನು ದೇಶದಿಂದ ಹೊರಗಟ್ಟಲು ಭಾರತೀಯ ಯುವಕರನ್ನು ಪ್ರೇರೇಪಿಸಿದರು. ಬಸಂತಿ ದೇವಿ ಅವರ ಪ್ರೇರಣೆಯಿಂದ ಲಕ್ಷಾಂತರ ಯುವಕರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ನೇತಾಜಿ ಸುಭಾಸ್ ಬೋಸ್ ಅವರು ಸ್ವಾತಂತ್ರ್ಯ ಹೋರಾಟಕ್ಕೆ ತಮಗೆ ಸ್ಪೂರ್ತಿ ನೀಡಿದ ಬಸಂತಿ ದೇವಿ ಅವರನ್ನು ‘ದತ್ತು ತಾಯಿ’ ಎಂದೇ ಕರೆಯುತ್ತಿದ್ದರು. ದೇಶದ ಸ್ವಾತಂತ್ರ್ಯಕ್ಕೆ ನೀಡಿದ ಕೊಡುಗೆಗಳಿಗಾಗಿ ಅವರು 1973 ರಲ್ಲಿ ಪದ್ಮ ವಿಭೂಷಣ ಗೌರವಕ್ಕೆ ಪಾತ್ರರಾಗಿದ್ದರು. 1974ರ ಮೇ 7ರಂದು ತಮ್ಮ 94 ನೇ ವಯಸ್ಸಿನಲ್ಲಿ ನಿಧನರಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!