ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗ್ಗೆ ಬೇಗ ತಿಂಡಿ ಸಿದ್ದವಾಗಬೇಕು ಮತ್ತು ರುಚಿಯಾಗಿ ಕೂಡ ಇರಬೇಕು ಅನ್ನೋರು ಒಮ್ಮೆ ಟ್ರೈ ಮಾಡಿ ಬ್ರೆಡ್ ದೋಸೆ.
ಬೇಕಾಗುವ ಸಾಮಾಗ್ರಿಗಳು:
ಬ್ರೆಡ್ ಸ್ಲೈಸ್
ರವೆ
ಮೊಸರು
ಅಕ್ಕಿ ಹುಡಿ
ಉಪ್ಪು
ಎಣ್ಣೆ
ಜೀರಿಗೆ
ಸಾಸಿವೆ
ಉದ್ದಿನ ಬೇಳೆ
ಕರಿಬೇವಿನೆಸಳು
ಹಸಿಮೆಣಸು
ಈರುಳ್ಳಿ
ಶುಂಠಿ
ಮಾಡುವ ವಿಧಾನ:
* ಮೊದಲು ಬ್ರೆಡ್‌ನ ಕಂದು ಭಾಗ ಕತ್ತರಿಸಿ ತೆಗೆಯಿರಿ, ನಂತರ ಉಳಿದ ಭಾಗವನ್ನು ತುಂಡುಗಳನ್ನಾಗಿ ಮಾಡಿ.
* ನೀರಿನಲ್ಲಿ 2 ನಿಮಿಷಗಳ ಕಾಲ ಎಲ್ಲಾ ಬ್ರೆಡ್ ತುಂಡುಗಳನ್ನು ನೆನೆಯಲು ಇಡಿ.
* ಒಂದು ಪಾತ್ರೆಯಲ್ಲಿ ರವೆ, ಅಕ್ಕಿ ಹಿಟ್ಟು ಮತ್ತು ನೀರನ್ನು ಸೇರಿಸಿಕೊಂಡು ದಪ್ಪನೆಯ ಹಿಟ್ಟನ್ನು ಸಿದ್ಧಮಾಡಿಕೊಳ್ಳಿ.
* ಈಗ ನೀರಿನಿಂದ ಬ್ರೆಡ್ ತುಂಡುಗಳನ್ನು ಹೊರತೆಗೆದು ಅವುಗಳನ್ನು ಚೆನ್ನಾಗಿ ಹುಡಿಮಾಡಿಕೊಳ್ಳಿ.
* ಹುಡಿ ಮಾಡಿದ ಬ್ರೆಡ್ ಅನ್ನು ಹಿಟ್ಟಿಗೆ ಸೇರಿಸಿ ಮತ್ತು ಇದಕ್ಕೆ ಮೊಸರನ್ನು ಹಾಕಿ, ಎಲ್ಲಾ ಸಾಮಾಗ್ರಿಗಳನ್ನು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.
* ಈಗ ಬ್ಲೆಂಡರ್‌ಗೆ ಎಲ್ಲವನ್ನೂ ಹಾಕಿ ತಿರುಗಿಸಿಕೊಳ್ಳಿ.
* ನಂತರ ಒಂದು ಪಾತ್ರೆಗೆ ಹಿಟ್ಟನ್ನು ಸುರಿದುಕೊಳ್ಳಿ ಮತ್ತು ಹಿಟ್ಟಿನ ಸಾಂದ್ರತೆಯನ್ನು ಪರಿಶೀಲಿಸಿ.
* ಈಗ ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ನಂತರ ಜೀರಿಗೆ, ಸಾಸಿವೆ,ಉದ್ದಿನ ಬೇಳೆ, ಕರಿಬೇವಿನೆಸಳು, ಈರುಳ್ಳಿ, ಶುಂಠಿ ಮತ್ತು ಹಸಿಮೆಣಸನ್ನು ಹಾಕಿ ಹುರಿದುಕೊಳ್ಳಿ.
* ಗ್ಯಾಸ್‌ನಿಂದ ಬಾಣಲೆಯನ್ನು ಇಳಿಸಿ, ಈಗ ತವಾ ತೆಗೆದುಕೊಂಡು ಬಿಸಿಮಾಡಿ.
* ಒಗ್ಗರಣೆಯನ್ನು ಹಿಟ್ಟಿಗೆ ಹಾಕಿ ಮತ್ತು ಎಲ್ಲವನ್ನೂ ಮಿಶ್ರ ಮಾಡಿಕೊಳ್ಳಿ. ನಂತರ ತವಾದ ಮೇಲೆ ಹಿಟ್ಟನ್ನು ದೋಸೆಯ ರೀತಿ ಹಾಕಿ ಚೆನ್ನಾಗಿ ಬೇಯಿಸಿ. ಈಗ ಬಿಸಿಬಿಸಿಯಾದ ಬ್ರೆಡ್ ದೋಸೆ ಸವಿಯಲು ಸಿದ್ಧ.