Tuesday, March 21, 2023

Latest Posts

ಬೆಂಗಳೂರಿನ ರೇಸ್‌ಕೋರ್ಸ್‌ ರಸ್ತೆಗೆ ಅಂಬರೀಶ್‌ ಹೆಸರಿಡಲು ಸಮ್ಮತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಕನ್ನಡ ಸಿನಿಪ್ರಿಯರಿಗೆ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಬೆಂಗಳೂರಿನ ರೇಸ್‌ಕೋರ್ಸ್‌ ರಸ್ತೆಗೆ ನಟ ಅಂಬರೀಶ್‌ ಹೆಸರನ್ನಿಡಲು ಬಿಬಿಎಂಪಿ ಅನಮೋದನೆ ನೀಡಿದೆ.

ರೇಸ್​ ಕೋರ್ಸ್ ರಸ್ತೆಗೆ ರೆಬೆಲ್ ಸ್ಟಾರ್ ಅಂಬರೀಶ್ ಅವರ ಹೆಸರನ್ನು ಇಡಲು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರು ಅನುಮೋದನೆ ನೀಡಿದ್ದಾರೆ. ಈ ಮೂಲಕ ರೆಬೆಲ್ ಸ್ಟಾರ್ ಹೆಸರು ಬೆಂಗಳೂರು ನಗರದ ಪ್ರಮುಖ ರಸ್ತೆಯಲ್ಲಿ ರಾರಾಜಿಸಲಿದೆ.

ಈ ಪ್ರಸ್ತಾವನೆಯನ್ನು ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ಅವರಿಗೆ ಪೂರ್ವ ವಲಯದ ಜಂಟಿ ಆಯುಕ್ತರು ಕಳುಹಿಸಿದ್ದರು. ತುರ್ತಾಗಿ ನಾಮಕರಣ ಮಾಡುವುದು ಅವಶ್ಯವಾಗಿರುವುದರಿಂದ, ಬಿಬಿಎಂಪಿ ಕಾಯ್ದೆಯಂತೆ ಅನುಮೋದನೆ ನೀಡಬೇಕೆಂದು ಕೋರಿದ್ದರು.

ಮಾರ್ಚ್‌ 14ರಂದು ಪೂರ್ವ ವಲಯದ ಆಯುಕ್ತರು ಟಿಪ್ಪಣಿಯನ್ನು ಆಡಳಿತಾಧಿಕಾರಿಯವರ ಮುಂದಿರಿಸಿದ್ದರು. ರೇಸ್‌ಕೋರ್ಸ್‌ ರಸ್ತೆಗೆ ಅಂಬರೀಶ್‌ ಹೆಸರಿಡುವ ಕಾರ್ಯಕ್ರಮ ವಾರದಲ್ಲೇ ಜರುಗಲಿದೆ ಎಂದು ಬಿಬಿಎಂಪಿ ಮೂಲಗಳು ಹೇಳಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!