Saturday, March 25, 2023

Latest Posts

ಆ ಸಿನಿಮಾ ಅರ್ಥ ಮಾಡಿಕೊಂಡರೆ ನೀವೂ ಸೂಪರ್ ಸ್ಟಾರ್ ಆಗುತ್ತೀರಿ-ಉಪೇಂದ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಇತ್ತೀಚಿನ ಚಿತ್ರ ‘ಕಬ್ಜಾ’. ಸಾಹಸ ನಾಟಕವಾಗಿ ಬರುತ್ತಿರುವ ಈ ಚಿತ್ರವು 1945 ರಲ್ಲಿ ಬ್ರಿಟಿಷರು ಭಾರತವನ್ನು ಆಳುವ ಹಿನ್ನೆಲೆಯನ್ನು ಹೊಂದಿದೆ. ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ಕೂಡ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಸುದೀಪ್ ಪೂರ್ಣ ಪ್ರಮಾಣದ ಪಾತ್ರದಲ್ಲಿ ಕಾಣಿಸಿಕೊಂಡರೆ, ಶಿವರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ಎಂಟ್ರಿ ಕೊಡಲಿದ್ದಾರೆ. ಶ್ರಿಯಾ ನಾಯಕಿಯಾಗಿ ನಟಿಸಿರುವ ಈ ಪ್ಯಾನ್ ಇಂಡಿಯಾ ವೈಡ್ ಸಿನಿಮಾ ಇಂದು (ಮಾರ್ಚ್ 17) ಪ್ರೇಕ್ಷಕರ ಮುಂದೆ ಬಂದಿದೆ.

ಈ ಸಿನಿಮಾದ ಪ್ರಚಾರದ ಭಾಗವಾಗಿ ಉಪೇಂದ್ರ ಟಾಲಿವುಡ್ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದರು. ತೆಲುಗಿನಲ್ಲೂ ಉಪೇಂದ್ರಗೆ ಒಳ್ಳೆಯ ಮಾರುಕಟ್ಟೆ ಇದೆ. ಈ ಕ್ರಮದಲ್ಲಿ ಸದ್ಯ ಉಪೇಂದ್ರ ನಿರ್ದೇಶನ ಮಾಡುತ್ತಿರುವ ʻಯುಐʼ ಸಿನಿಮಾದ ಬಗ್ಗೆ ಹೇಳಬೇಕು ಎಂದು ಪ್ರೇಕ್ಷಕರು ಕೇಳಿದ್ದಾರೆ.

ಅದಕ್ಕೆ ಉತ್ತರಿಸಿದ ಉಪೇಂದ್ರ.. ”ಯುಐ ಸಿನಿಮಾ ಹೊಸದಾಗಿರುತ್ತದೆ. ಮೇಕಿಂಗ್ ಮತ್ತು ಚಿತ್ರಕಥೆ ನನ್ನ ಶೈಲಿಯಲ್ಲಿದೆ. ಇದು ಸಾಮಾನ್ಯ ಕಮರ್ಷಿಯಲ್ ಸಿನಿಮಾ ಆಗುವುದಿಲ್ಲ. ಅರ್ಥಮಾಡಿಕೊಳ್ಳಲು ಸ್ವಲ್ಪ ಯೋಚಿಸಬೇಕು. ಈ ಸಿನಿಮಾವನ್ನು ನೀವು ಅರ್ಥಮಾಡಿಕೊಂಡಿದ್ದೇ ಆದರೆ, ನೀವೂ ಸೂಪರ್ ಸ್ಟಾರ್ ಆಗುತ್ತೀರಿ” ಎಂದರು. ಸದ್ಯ ಚಿತ್ರೀಕರಣದಲ್ಲಿರುವ ಈ ಸಿನಿಮಾ ಪ್ಯಾನ್ ಭಾರತ ಚಿತ್ರವಾಗಲಿದೆ. ಈಗಾಗಲೇ ಈ ಸಿನಿಮಾದ ಪೋಸ್ಟರ್ ಹಾಗೂ ಸ್ಟಿಲ್ಸ್ ಸಿನಿಮಾದ ಮೇಲೆ ಭಾರೀ ಹೈಪ್ ಕ್ರಿಯೇಟ್ ಮಾಡ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!