Sunday, March 26, 2023

Latest Posts

ಬಿಬಿಎಂಪಿ ಬಜೆಟ್‌ : 11157 ಸಾವಿರ ಕೋಟಿ ಗಾತ್ರದ ಬಜೆಟ್ ಮಂಡನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

2023-24ನೇ ಸಾಲಿನ ಬಿಬಿಎಂಪಿ ಆಯವ್ಯಯವನ್ನು ಇಂದು ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯ್‌ಪುರ ಅವರು ಬೆಂಗಳೂರಿನ ಸರ್.ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಮಂಡಿಸಿದರು.

ಒಟ್ಟು 11,157.83 ಗಾತ್ರದ ಬಜೆಟ್ ಮಂಡನೆ‌ ಮಾಡಿದ್ದು, ಬೀದಿ ವ್ಯಾಪಾರಿಗಳ ವಲಯಗಳಿಗಾಗಿ 25 ಕೋಟಿ ರೂ. ಹಾಗೂ ಮೇಲ್ಸೇತುವೆ ಮತ್ತು ಕೆಳಸೇತುವೆಗಳ ನಿರ್ಮಾಣಕ್ಕಾಗಿ ಒಟ್ಟು 210 ಕೋಟಿ ರೂ ನೀಡಿದೆ. ಇದು ಆತ್ಮನಿರ್ಭರ ಆಯವ್ಯಯ ಎಂದು ಬಿಬಿಎಂಪಿ ಘೋಷಣೆ ಮಾಡಿದೆ. ಬಜೆಟ್​ನ ಸಂಪೂರ್ಣ ಮಾಹಿತಿ ಇಲ್ಲಿದೆ.

  • ಅಮೃತ ನಗರೋತ್ಥಾನ ಯೋಜನೆಯಲ್ಲಿ 160 ಕೋಟಿ ರೂ ವೆಚ್ಚದಲ್ಲಿ ಪಾಲಿಕೆಯ ಶಾಲೆಗಳ ಕಟ್ಟಡ ನವೀಕರಣ.
  • ಈ ವರ್ಷದಲ್ಲಿ 2000 ಒಂಟಿ ಮನೆ ನಿರ್ಮಾಣ ಯೋಜನೆಯ ಅನುಷ್ಠಾನಕ್ಕೆ 100 ಕೋಟಿ ರೂ ಮೀಸಲು.
  • 2022-23 ನೇ ವರ್ಷದಲ್ಲಿ ಎಲ್ಲಾ ವರ್ಗದ ಬಡ ವಿದ್ಯಾರ್ಥಿಗಳಿಗೆ 10,000 ಲ್ಯಾಪ್ಟಾಪ್‌ಗಳನ್ನು ವಿತರಿಸಲಾಗುತ್ತಿದೆ. ಈ ಯೋಜನೆಗೆ 9 ಕೋಟಿ ರೂ ಒದಗಿಸಲಾಗಿದೆ.
  • ರಾತ್ರಿ ತಂಗುದಾಣ ನಿರ್ವಹಣಿಗೆ 3 ಕೋಟಿ ರೂ ಹಣ ಬಿಡುಗಡೆ.
  • ಜಯಮಹಲ್ ರಸ್ತೆಯಲ್ಲಿ 65 ಕೋಟಿ ರೂ ಗಳ ವೆಚ್ಚದಲ್ಲಿ ಮೇಲ್ಸ್ತುವೆ ನಿರ್ಮಾಣ.
  • ಗೋಕುಲ ರಸ್ತೆಯ ಮತ್ತಿಕೆರೆ ತಿರುವಿನಲ್ಲಿ ಐ.ಐ.ಎಸ್.ಸಿ. ಒದಗಿಸುತ್ತಿರುವ ಭೂಮಿಯಲ್ಲಿ 40 ಕೋಟಿ ರೂ ವೆಚ್ಚದಲ್ಲಿ ಮೇಲ್ವೇತುವೆ ನಿರ್ಮಾಣ.
  • 1,410 ಕೋಟಿ ವೆಚ್ಚದಲ್ಲಿ 150 ಕಿ.ಮೀ.​​ ರಸ್ತೆಗೆ ವೈಟ್ ಟಾಪಿಂಗ್.
  • ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ವಿತರಣೆ ವೇಳೆ ಡಾಲರ್‌ 2 ಲಕ್ಷ ಪುರಸ್ಕಾರ.
  • ಸರ್​ ಎಂ.ವಿಶ್ವೇಶ್ವರಯ್ಯ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಫ್ಲೈಓವರ್.
  • ತುಮಕೂರು ರಸ್ತೆಯಿಂದ ನಾಯಂಡಹಳ್ಳಿ ಜಂಕ್ಷನ್ ವರೆಗೆ ಸಿಗ್ನಲ್‌ ಮುಕ್ತ ಕಾರಿಡಾರ್‌ಗಾಗಿ 70 ಕೋಟಿ ರೂ.
  • ನಗರದಲ್ಲಿ ಮಹಿಳೆಯರಿಗಾಗಿ 250 ಶೀ-ಟಾಯ್ಲೆಟ್ ನಿರ್ಮಾಣ.
  • ಮೇಲೇತುವೆ ಮತ್ತು ಕೆಳಸೇತುವೆಗಳ ನಿರ್ವಹಣೆಗೆ 20 ಕೋಟಿ ರೂಗಳು ಮೀಸಲು.
  • 80 ಕೋಟಿ ರೂ ಗಳ ವೆಚ್ಚದಲ್ಲಿ 8 ಕೊಳಗೇರಿ ಪ್ರದೇಶಗಳ ಪುನರ್ ಅಭಿವೃದ್ಧಿ.
  • 50 ಕೋಟಿ ರೂ ಗಳ ವೆಚ್ಚದಲ್ಲಿ 10 ಹೊಸ ‘ಸಿಟಿ ಪ್ಲಾಜಾ’ ರಚನೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!