Thursday, March 23, 2023

Latest Posts

ಡಾಲರ್‌ ಎದುರು 11 ಪೈಸೆ ಕುಸಿದ ರೂಪಾಯಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗುರುವಾರದ ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ವಿರುದ್ಧ ರೂಪಾಯಿ 11 ಪೈಸೆ ಕುಸಿದು 82.60 ಕ್ಕೆ ತಲುಪಿದೆ. ವಿದೇಶಿ ನಿಧಿಯ ಹೊರಹರಿವು ಹೂಡಿಕೆದಾರರ ಭಾವನೆಗಳ ಮೇಲೆ ಹೆಚ್ಚಿನ ಪರಿಣಾಮ ಬೀರಿದ್ದು ಇದಲ್ಲದೇ ಡಾಲರ್‌ ಬಲವರ್ಧನೆಯೂ ಕೂಡ ಈ ಕುಸಿತಕ್ಕೆ ಕಾರಣ ಎನ್ನಲಾಗಿದೆ.

ಅಂತರಬ್ಯಾಂಕ್ ವಿದೇಶಿ ವಿನಿಮಯದಲ್ಲಿ ಡಾಲರ್‌ ವಿರುದ್ಧ ರುಪಾಯಿಯು 82.57ರಲ್ಲಿ ತೆರೆದಿದ್ದು ನಂತರದಲ್ಲಿ 82.60ಕ್ಕೆ ಕುಸಿದು ಹಿಂದಿನ ಮುಕ್ತಾಯಕ್ಕಿಂತ 11 ಪೈಸೆ ನಷ್ಟವನ್ನು ದಾಖಲಿಸಿದೆ. ಬುಧವಾರದಂದು ರೂಪಾಯಿಯು 82.49ಕ್ಕೆ ಸ್ಥಿರವಾಗಿ ಮುಕ್ತಾಯವಾಗಿತ್ತು.

ಆರು ಕರೆನ್ಸಿಗಳ ವಿರುದ್ಧ ಡಾಲರ್‌ ಬಲವನ್ನು ಅಳೆಯುವ ಸೂಚ್ಯಂಕವು ಶೇಕಡಾ 11 ರಷ್ಟು ಏರಿಕೆಯಾಗಿ 104.59 ಕ್ಕೆ ತಲುಪಿದೆ. ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕಚ್ಚಾತೈಲವು ಪ್ರತಿ ಬ್ಯಾರೆಲ್‌ಗೆ 83.34 ಡಾಲರ್‌ ಗಳಷ್ಟಾಗಿದ್ದು 0.04ಶೇಕಡಾ ಏರಿದೆ.

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಬಿಎಸ್‌ಇ ಸೆನ್ಸೆಕ್ಸ್ 303.83 ಅಂಕಗಳು ಅಥವಾ 0.51 ಶೇಕಡಾ ಕಡಿಮೆಯಾಗಿ 59,107.25 ರ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. NSE ನಿಫ್ಟಿ 80.70 ಪಾಯಿಂಟ್ ಅಥವಾ 0.46 ಶೇಕಡಾ ಕಡಿಮೆಯಾಗಿ 17,370.20 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!