ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ರಸ್ತೆಗಳಿಗೆ ವೈಟ್ ಟಾಪಿಂಗ್ ಮಾಡಲು ಸಜ್ಜಾಗಿರುವ ಬಿಬಿಎಂಪಿ ಇನ್ನೇನು ಕಾಮಗಾರಿ ಆರಂಭ ಮಾಡಲಿದೆ.
ಒಟ್ಟಾರೆ ನಗರದ 43 ರಸ್ತೆಗಳಿಗೆ 1,700 ಕೋಟಿ ರೂಪಾಯಿ ವೆಚ್ಚದಲ್ಲಿ ವೈಟ್ ಟಾಪಿಂಗ್ ನಡೆಸೋಕೆ ತಯಾರಿ ನಡೆದಿದೆ. ಟ್ಯಾನರಿ ರಸ್ತೆ, ದೊಡ್ಡಿ ಸರ್ಕಲ್ ಕಡೆಗೆ, ಲೋವರ್ ಅಗರಂ ರಸ್ತೆ, ಈಜೀಪುರ ಕಡೆಗೆ, ಎಸ್ಪಿ ರಸ್ತೆಯಿಂದ ಹಡ್ಸನ್ ಸರ್ಕಲ್ ವರೆಗೆ, ಸಿಬಿಐ ರಸ್ತೆ, ಆರ್ಟಿ ನಗರ ಕಡೆಗೆ, ರೆಸಿಡೆನ್ಸಿ ರಸ್ತೆ, ರಿಚ್ಮಂಡ್ ರಸ್ತೆ ಕಡೆಗೆ, ಮೌರ್ಯ ಜಂಕ್ಷನ್ ನಿಂದ ಹರೆ ಕೃಷ್ಣ ಜಂಕ್ಷನ್ ವರೆಗೆ ವೈಟ್ ಟ್ಯಾಪಿಂಗ್ ಮಾಡಲಾಗುತ್ತದೆ.
ವೈಟ್ ಟಾಪಿಂಗ್ ಕಾಮಗಾರಿ ನಡೆಯುವ ರಸ್ತೆಗಳಲ್ಲಿ ಪೈಪ್ ಲೈನ್, ಕೇಬಲ್ ಅಳವಡಿಕೆ ಇದ್ದರೆ ಕಾಮಗಾರಿಗೂ ಮೊದಲೇ ಮುಗಿಸುವಂತೆ ಬಿಡಿಎ, ಜಲಮಂಡಳಿ ಹಾಗೂ ಟೆಲಿಕಾಂ ಕಂಪನಿಗಳಿಗೆ ಸೂಚಿಸಿದೆ. ವೈಟ್ ಟಾಪಿಂಗ್ ಕಾಮಗಾರಿಯನ್ನು ಬಿಬಿಎಂಪಿ ವಿಂಗಡಿಸಿ ಐದು ಗುತ್ತಿಗೆ ಕಂಪೆನಿಗಳಿಗೆ ಹಂಚಿ, ಕಾಮಗಾರಿ ನಡೆಸಲು ಮುಂದಾಗಿದೆ. ಈ ಪೈಕಿ 800 ಕೋಟಿ ರೂಪಾಯಿ ಕಾಮಗಾರಿಯನ್ನ ಬಿಬಿಎಂಪಿಯ ಯೋಜನಾ ವಿಭಾಗದ ಉಸ್ತುವಾರಿಯಲ್ಲಿ ನಡೆದರೆ, ಉಳಿದಂತೆ 900 ಕೋಟಿ ರೂಪಾಯಿ ಮೊತ್ತದ ಕಾಮಗಾರಿ ರಸ್ತೆ ಹಾಗೂ ಮೂಲಭೂತ ಸೌಕರ್ಯ ವಿಭಾಗದಿಂದ ನಡೆಸಲಿದೆ.