BOLLYWOOD| ಪ್ರೀತಿ ಜಿಂಟಾಗೆ ಕಹಿ ಅನುಭವ: ಪ್ರಿಯಾಂಕಾ ಚೋಪ್ರಾ, ಹೃತಿಕ್ ರೋಷನ್ ಪ್ರತಿಕ್ರಿಯೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸೆಲೆಬ್ರಿಟಿ ಸ್ಥಾನಮಾನ ಪಡೆದ ನಂತರ ಖ್ಯಾತಿಯ ಜೊತೆಗೆ ಹಲವು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಈ ಸೆಲೆಬ್ರಿಟಿಗಳು ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲಿಯಾದರೂ ಕಾಣಿಸಿಕೊಂಡರೆ, ಅವರೊಂದಿಗೆ ಫೋಟೋ ತೆಗೆದುಕೊಳ್ಳುವ ಭರದಲ್ಲಿ ಅಭಿಮಾನಿಗಳು ಮುಜುಗರ ಉಂಟು ಮಾಡುತ್ತಾರೆ. ಈ ಸರಣಿಯಲ್ಲಿ ಬಾಲಿವುಡ್ ಚೆಲುವೆ ಪ್ರೀತಿ ಜಿಂಟಾಗೆ ಕಹಿ ಅನುಭವವಾಗಿದೆ. ತನ್ನ ಮಕ್ಕಳೊಂದಿಗೆ ಈ ಶನಿವಾರ (ಏಪ್ರಿಲ್ 8) ಮುಂಬೈನ ಹೋಟೆಲ್‌ಗೆ ಹೋಗಿದ್ದರು.

ಹೋಟೆಲ್‌ನಿಂದ ಹೊರಗೆ ಬರುತ್ತಿದ್ದಾಗ ಮಹಿಳೆಯೊಬ್ಬರು ಪ್ರೀತಿ ಜಿಂಟಾ ಜೊತೆ ಫೋಟೋ ತೆಗೆಯಲು ಯತ್ನಿಸಿದ್ದಾರೆ. ಅಲ್ಲಿಗೆ ನಿಲ್ಲದ ಮಹಿಳೆ ಪ್ರೀತಿ ಮಗಳು ‘ಜಿಯಾ’ಗೆ ಅನುಮತಿಯಿಲ್ಲದೆ ಮುತ್ತು ಕೊಟ್ಟಿದ್ದಾಳೆ. ಕಾರು ಹತ್ತುವಾಗ ವಿಕಲಚೇತನರೊಬ್ಬರು ಹಣ ಕೇಳಿ ಕಾರನ್ನು ತಡೆಯಲು ಯತ್ನಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋಗಳು ಸದ್ಯ ವೈರಲ್ ಆಗುತ್ತಿವೆ. ಮತ್ತು ಪ್ರೀತಿ ಜಿಂಟಾ ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ನಮ್ಮ ಕ್ಷೇತ್ರದಲ್ಲಿ ಮಕ್ಕಳು ನಮ್ಮೊಂದಿಗಿಲ್ಲ, ಅವರು ಸೆಲೆಬ್ರಿಟಿಗಳಲ್ಲ.  ಮಕ್ಕಳನ್ನು ಮುಕ್ತವಾಗಿ ಬದುಕಲು ಬಿಡಿ. ಅವರನ್ನು ಮುಟ್ಟುವುದು, ಹಿಡಿದುಕೊಳ್ಳುವುದು, ಫೋಟೋ ತೆಗೆಯುವುದು ಇತ್ಯಾದಿಗಳಿಂದ ಅವರಿಗೆ ತೊಂದರೆ ಕೊಡಬೇಡಿ ಎಂದು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಹೃತಿಕ್ ರೋಷನ್, ಪ್ರಿಯಾಂಕಾ ಚೋಪ್ರಾ, ಅರ್ಜುನ್ ರಾಂಪಾಲ್ ಮತ್ತು ಮಲೈಕಾ ಅರೋರಾ ಪ್ರತಿಕ್ರಿಯಿಸಿ ಅವರಿಗೆ ಬೆಂಬಲ ನೀಡಿದ್ದಾರೆ.

https://www.instagram.com/reel/CqxOdlAoHdP/?utm_source=ig_web_copy_link

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!