ಏಷ್ಯನ್ ಗೇಮ್ಸ್‌ಗೆ ಟೀಂ ಇಂಡಿಯಾ ಕಳಿಸೋಕೆ ಬಿಸಿಸಿಐ ಒಪ್ಪಿಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ಬಾರಿ ವಿಶ್ವಕಪ್ ಆರಂಭದ ಸಮಯದಲ್ಲಿಯೇ ಏಷ್ಯನ್ ಗೇಮ್ಸ್ ಆರಂಭವಾಗಲಿದ್ದು, ಈ ಬಾರಿ ಪುರುಷರ ಹಾಗೂ ಮಹಿಳೆಯರ ಕ್ರಿಕೆಟ್ ತಂಡವನ್ನು ಕಳುಹಿಸಲು ಬಿಸಿಸಿಐ ಒಪ್ಪಿಗೆ ನೀಡಿದೆ.

ಸೆ.23 ರಂದು ಏಷ್ಯನ್ ಗೇಮ್ಸ್ ಆರಂಭವಾಗಲಿದ್ದು, ಸಂಪೂರ್ಣ ಮಹಿಳಾ ತಂಡವನ್ನು ಕಳುಹಿಸಲಿದೆ, ಪುರುಷರ ಮ್ಯಾಚ್‌ಗೆ ಬಿ ತಂಡವನ್ನು ಕಣಕ್ಕೆ ಇಳಿಸಲಿದೆ. ಈ ಬಾರಿ ಟಿ೨೦ ಮಾದರಿಯಲ್ಲಿ ಏಷ್ಯನ್ ಗೇಮ್ಸ್ ಇರಲಿದೆ.

ಈ ಮೊದಲು ವಿಶ್ವಕಪ್ ಸನಿಹ ಇರುವುದರಿಂದ ಏಷ್ಯನ್ ಗೇಮ್ಸ್‌ಗೆ ಬಿಸಿಸಿಐ ಅನುಮತಿ ನೀಡಿರಲಿಲ್ಲ. ಇದೀಗ ಗ್ರೀನ್ ಸಿಗ್ನಲ್ ನೀಡಿದ್ದು, ಇದೇ ತಿಂಗಳಿನಲ್ಲಿ ಆಟಗಾರರ ಪಟ್ಟಿಯನ್ನು ಒಲಿಂಪಿಕ್ ಸಂಸ್ಥೆಗೆ ಕಳುಹಿಸಲಿದೆ.

ಅಕ್ಟೋಬರ್ 5ರಿಂದ ಏಕದಿನ ವಿಶ್ವಕಪ್ ಆರಂಭವಾಗಲಿದೆ, ಹೀಗಾಗಿ ಪುರುಷರ ಎ ತಂಡವನ್ನು ಕಳುಹಿಸುವುದು ಕಷ್ಟವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!