BEAUTY TIPS| ಸದಾ ಯಂಗ್‌ ಆಗಿ ಕಾಣಬೇಕೇ? ಇದನ್ನು ಅನುಸರಿಸಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವರ್ಷ ನಲುವತ್ತು ಕಳೆದರೂ ಅನೇಕ ಮಂದಿ ಇನ್ನೂ ಷೋಡಷಿಯರಂತೆ ಕಾಣುತ್ತಾರೆ. ಅನೇಕರು ತಮ್ಮ ಪ್ರಾಯವನ್ನು ಮುಚ್ಚಿಡುವ ಎಲ್ಲಾ ಪ್ರಯತ್ನಮಾಡಿದರೂ ವಿಫಲರಾಗುತ್ತಾರೆ. ನಲುವತ್ತರ ನಂತರವೂ ನಿಮ್ಮ ಚರ್ಮ ಹೊಳಪಿನಿಂದ ಕೂಡಿ ಆಕರ್ಷಕವಾಗಿರಬೇಕೆಂದರೆ ಈ ಕ್ರಮ ಅನುಸರಿಸುವುದು ಬಹಳ ಮುಖ್ಯ.

ದೇಹಕ್ಕೆ ವಯಸ್ಸಾದಂತೆ ಚರ್ಮದ ಕಾಂತಿ ಕಡಿಮೆಯಾಗತೊಡಗುತ್ತದೆ. ಇದನ್ನು ಮರೆಮಾಚಲು ಹಲವು ಕ್ರಮಗಳಿಗೆ ಮೊರೆಹೋಗುತ್ತಾರೆ. ಆದರೆ ಅವೆಲ್ಲವೂ ನಿಗಧಿತ ಫಲಿತಾಂಶ ನೀಡುತ್ತದೆ ಎಂದೇನಲ್ಲ. ಚರ್ಮದ ಹೊರಗಿನ ಕಾಳಜಿಯಷ್ಟೇ ಒಳಗಿನ ಕಾಳಜಿಯೂ ಬಹುಮುಖ್ಯ. ದೇಹಕ್ಕೆ ಸೇರುವ ಪೋಷಕಾಂಶಗಳ ಮೇಲೆ ಇವೆಲ್ಲವೂ ಅವಲಂಬಿತವಾಗಿದೆ. ಹಾಗಾದರೆ ದೇಹಕ್ಕೆ ಯಾವೆಲ್ಲ ಪೋಷಕಾಂಶಗಳು ಬೇಕು ಎಂಬುದನ್ನು ನಾವು ತಿಳಿಯಬೇಕಾಗುತ್ತದೆ.

ಕೂದಲು ಹಾಗೂ ಚರ್ಮದ ಆರೋಗ್ಯಕ್ಕೆ ಪ್ರೊಟೀನ್‌ ಅಂಶ ಅತೀ ಅವಶ್ಯಕವಾದುದು. ದೇಹದ ತೂಕಕ್ಕೆ ಅನುಗುಣವಾಗಿ ಪ್ರೊಟೀನ್‌ ಅಂಶವನ್ನು ಬಳಸಬೇಕಾಗುತ್ತದೆ. ನೀವು 50ಕೆಜಿ ತೂಕವುಳ್ಳವರಾದರೆ 50ಗ್ರಾಂ ಪ್ರೋಟೀನ್‌ ದಿನವೊಂದಕ್ಕೆ ನೀವು ಸೇವಿಸಬೇಕಾಗುತ್ತದೆ. ಪ್ರೊಟೀನ್‌ ಯುಕ್ತ ಆಹಾರ ಸೇವನೆಯಿಂದ ಇದನ್ನು ಪಡೆಯಬಹುದಾಗಿದೆ.

ಹೇರಳವಾಗಿ ಲಭ್ಯವಾಗಿರುವ ಸೊಪ್ಪು ತರಕಾರಿಗಳು, ಹಣ್ಣುಗಳ ಸೇವನೆಯಿಂದ ದೇಹಕ್ಕೆ ಬೇಕಾದ ಎಲ್ಲಾರೀತಿಯ ಪೋಷಕಾಂಶಗಳು, ಫೈಬರ್‌ ಅಂಶಗಳು ಲಭ್ಯವಾಗುವುದು. ಚರ್ಮದ ಕಾಂತಿ ಹೆಚ್ಚಾಗಲು ಇವು ಸಹಕಾರಿಯಾಗುತ್ತವೆ.

ಉತ್ತಮ ಜೀವಸತ್ವ, ಖನಿಜಾಂಶಹೊಂದಿದ ಆಹಾರಗಳು ನಿಮ್ಮ ಆಹಾರ ಚರ್ಯೆಯಲ್ಲಿ ಇರುವಂತೆ ನೋಡಿಕೊಳ್ಳಿ. ಸರಿಯಾದ ಪ್ರಮಾಣದಲ್ಲಿ ನೀರು ಸೇವನೆಯೂ ಮುಖ್ಯವಾಗುತ್ತದೆ. ಇವುಗಳನ್ನು ಅನುಸರಿಸಿ ಆರೋಗ್ಯ, ಚರ್ಮಾರೋಗ್ಯ ಕಾಪಾಡಿಕೊಳ್ಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!