ಕೊಹ್ಲಿ ಬೆಂಬಲಕ್ಕೆ ನಿಂತು ಟೀಕಾಕಾರ ಬಾಯಿ ಮುಚ್ಚಿಸಿದ ದಾದಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ವಿಶ್ವ ಕ್ರಕೆಟ್‌ ನಲ್ಲಿ ದಶಕಗಳಿಗೂ ಹೆಚ್ಚುಕಾಲ ಸಾಮ್ರಾಟನಂತೆ ಮೆರೆದ ವಿರಾಟ್‌ ಕೊಹ್ಲಿ ಈಗ ವೃತ್ತಿ ಜೀವನ ಅತ್ಯಂತ ಸಂಕಷ್ಟದ ಸ್ಥಿತಿ ಎದುರಿಸುತ್ತಿದ್ದಾರೆ. ಕೊಹ್ಲಿ ತಮ್ಮ ಕೊನೆಯ ಅಂತರಾಷ್ಟ್ರೀಯ ಶತಕ ಗಳಿಸಿದ್ದು 2019 ರಲ್ಲಿ. ಕಳೆದ 2 ವರ್ಷಗಳಿಂದ ವಿರಾಟ್‌ ಬ್ಯಾಟ್‌ ಸದ್ದು ಮಾಡುತ್ತಿಲ್ಲ. ಏಕದಿನ, ಟಿ 20, ಟೆಸ್ಟ್‌ ಹೀಗೆ ಮೂರೂ ಮಾದರಿಗಳಲ್ಲಿ ವಿರಾಟ್‌ ಸತತವಾಗಿ ವಿಫಲರಾಗುತ್ತಿದ್ದಾರೆ.  ಕೆಳಗೆ ಬಿದ್ದವನಿಗೆ ಆಳಿಗೊಂದು ಕಲ್ಲು ಎಂಬಂತೆ ವಿರಾಟ್ ಕೊಹ್ಲಿ ಫಾರ್ಮ್‌ ಬಗ್ಗೆ ಮಾಜಿ ಕ್ರಿಕೆಟಿಗರು ಕಟು ಟೀಕೆ ಮಾಡುತ್ತಿದ್ದಾರೆ. ಟೀಂ ಇಂಡಿಯಾದಿಂದ ಕೊಹ್ಲಿಯನ್ನು ಹೊರಗೆ ಹಾಕುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಕೊಹ್ಲಿ ಬೆಂಬಲಕ್ಕೆ ಧಾವಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಗಂಗೂಲಿ, ವಿರಾಟ್‌ ಭಾರತದ ಸ್ಟಾರ್ ಬ್ಯಾಟ್ಸ್ಮನ್.‌ ಆತ ಶೀಘ್ರದಲ್ಲೇ ಫಾರ್ಮ್‌ಗೆ ಮರಳಲಿದ್ದಾರೆ.  ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ ಅಂಕಿ ಅಂಶಗಳನ್ನು ಗಮನಿಸಿ. ಸಾಮರ್ಥ್ಯ ಮತ್ತು ಗುಣಮಟ್ಟವಿಲ್ಲದೆ ಆ ಮಟ್ಟಿನ ಯಶಸ್ಸು  ಸಾಧಿಸಲು ಸಾಧ್ಯವಿಲ್ಲ. ಅವರು ಕಠಿಣ ಸಮಯವನ್ನು ಎದುರಿಸುತ್ತಿದ್ದಾರೆ. ಶ್ರೇಷ್ಠ ಆಟಗಾರ ಕೊಹ್ಲಿಗೆ ಅದರಿಂದ ಹೇಗೆ ಹೊರಬರಬೇಕೆಂಬುದು ತಿಳಿದಿದೆ. ಅವರು ಶೀಘ್ರದಲ್ಲೇ ಕಮ್‌ ಬ್ಯಾಕ್‌ ಮಾಡಲಿದ್ದಾರೆ ಎಂದು ಹೇಳಿದ್ದಾರೆ.
ಫಾರ್ಮ್ ಕಳೆದುಕೊಳ್ಳುವುದು ಕ್ರಿಕೆಟ್‌ನಲ್ಲಿ ಹೊಸದೇನಲ್ಲ. ಇವುಗಳು ಕ್ರೀಡೆಯಲ್ಲಿ ನಡೆಯುತ್ತವೆ. ಇದು ಎಲ್ಲರಿಗೂ ಸಂಭವಿಸಿದೆ. ಇದು ಸಚಿನ್‌ಗೆ ಸಂಭವಿಸಿದೆ, ರಾಹುಲ್‌ಗೆ ಸಂಭವಿಸಿದೆ, ನನಗೆ ಸಹ ಸಂಭವಿಸಿದೆ, ಈ ಕೊಹ್ಲಿಗೆ ಸಂಭವಿಸಿದೆಯಷ್ಟೇ. ಅದು ಕ್ರೀಡೆಯ ಒಂದು ಭಾಗವಾಗಿದೆ. ಕಳೆದ 12-13 ವರ್ಷಗಳಲ್ಲಿ ವಿರಾಟ್‌ ಭಾರತೀಯ ಕ್ರಿಕೆಟ್ ನ ಅತ್ಯುತ್ತಮ ಆಟಗಾರನಾಗಿ ಶ್ರೇಷ್ಠ ಪ್ರದರ್ಶನಗಳಮನ್ನು ನೀಡಿದ್ದಾರೆ. ಕೊಹ್ಲಿ ಮತ್ತೆ ತಮ್ಮ ಆಟದ ಉತೃಷ್ಟ ಹಂತವನ್ನು ಮುಟ್ಟಬೇಕು.  ತನ್ನ ನೈಜ ಆಟವನ್ನು ಆಡಬೇಕು. ಸ್ಪತಃ ಕೊಹ್ಲಿ ತನ್ನ ಕೆಟ್ಟ ದಿನಗಳಿಂದ ಹೊರಬರು ವ ಪ್ರಯತ್ನ ನಡೆಸಬೇಕು. ಅವರು ಅದರಲ್ಲಿ ಯಶಸ್ವಿಯಾಗುತ್ತಾರೆ ಎಂಬ ಖಾತ್ರಿಯಿದೆ ಎಂದು  ಗಂಗೂಲಿ ವಿರಾಟ್‌ ಕೊಹ್ಲಿಯ ಬೆಂಬಲಕ್ಕೆ ಧಾವಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!