ತುರ್ತು ಪರಿಸ್ಥಿತಿಯ ಇಂದಿರಾ ಪಾತ್ರದಲ್ಲಿ ಕಂಗನಾ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಿಟೌನ್‌ ಬೆಡಗಿ ಕಂಗನಾ ರಣಾವತ್‌ ಬಯೋಪಿಕ್‌ಗಳತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ತಮಿಳುನಾಡಿನ ಮಾಜಿ ಸಿಎಂ ದಿವಗಂತ ಜಯಲಲಿತಾ ಬಯೋಪಿಕ್‌ ಮೂಲಕ ಎಲ್ಲರ ಮನಗೆದ್ದಿದ್ದ ಕಂಗನಾ ರಣಾವತ್‌ ಇದೀಗ ಲೆಜೆಂಡರಿ ನಾಯಕಿ ಇಂದಿರಾ ಗಾಂಧಿ ಲುಕ್‌ನಲ್ಲಿ ಮಿಂಚಲಿದ್ದಾರೆ. ಎಮರ್ಜೆನ್ಸಿ ಟೈಟಲ್‌ ಮೂಲಕ ಸಿನಿಮಾದ ಫಸ್ಟ್‌ ಲುಕ್‌ ರಿವೀಲ್‌ ಆಗಿದ್ದು, ಕಂಗನಾ ಥೇಟ್‌ ಇಂದಿರಾ ಗಾಂಧಿ ಅವರ ರೀತಿಯೇ ಕಾಣುತ್ತಿದ್ದಾರೆ.

ಇಂದಿರಾ ಗಾಂಧಿ ಭಾರತದ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಎದುರಿಸಿದ ಸವಾಲು, ಸಮಸ್ಯೆಗಳ ಕಥೆಯ ಹೂರಣವಿದೆ. ಆಶ್ಚರ್ಯ ಸಂಗತಿ ಏನಪ್ಪಾ ಅಂದ್ರೆ ಈ ಸಿನಿಮಾವನ್ನು ಕಂಗನಾ ರಣಾವತ್‌ ಅವರೇ ನಿರ್ದೇಶನ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!