ಮುಂದಿನ ವರ್ಷದಿಂದ ಮಹಿಳಾ IPL: ಎಷ್ಟು ತಂಡಗಳು ಭಾಗಿಯಾಗಿಲಿವೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್
ವಿಶ್ವದ ವಿಶ್ವದ ರಾಷ್ಟ್ರಗಳಲ್ಲಿ ನಡೆಯುವ ಟಿ20 ಲೀಗ್‌ ಗಳು ಭಾರೀ ಜನಪ್ರಿಯತೆ ಗಳಿಸುತ್ತಿವೆ. ಬಿಗ್‌ ಬ್ಯಾಷ್‌ ನಂತಹ ಟೂರ್ನಿಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಟಿ-20 ಲೀಗ್‌ ನಡೆಸಲಾಗುತ್ತಿದ್ದು ಅಭಿಮಾನಿಗಳ ಮನಗೆದ್ದಿದೆ. ಇತ್ತೀಚಿನ ದಿನಗಳಲ್ಲಿ ಭಾರತೀಯ ಮಹಿಳಾ ಕ್ರಿಕೆಟ್‌ ತಂಡವು ಸಾಕಷ್ಟು ಮನ್ನಣೆ ಗಳಿಸಿದೆ. ವಿಶ್ವ ಮಟ್ಟದ ಟೂರ್ನಿಗಳಲ್ಲಿ ವನಿತೆಯರ ತಂಡದ ಪ್ರದರ್ಶನ ಅತ್ಯುತ್ತಮವಾಗಿದೆ. ಭಾರತದಲ್ಲಿ ವನಿತೆಯರ ಐಪಿಎಲ್‌ ಪ್ರಾರಂಭಿಸುವಂತೆ ಮಹಿಳಾ ಕ್ರಿಕೆಟಿಗರು, ಅಭಿಮಾನಿಗಳು ಹಲವಾರು ವರ್ಷಗಳಿಂದ ಬೇಡಿಕೆ ಇಡುತ್ತಿದ್ದಾರೆ. ಕ್ರಿಕೆಟ್‌ ಪ್ರಿಯರ ಮನವಿಯನ್ನು ಪುರಸ್ಕರಿಸಿರುವ ಬಿಸಿಸಿಐ 2023ರ ಮಾರ್ಚ್‌ ನಲ್ಲಿ ಮಹಿಳಾ ಐಪಿಎಲ್ ಆರಂಭಿಸಲು ಸಿದ್ಧತೆಗಳನ್ನು ನಡೆಸಿದೆ.
ಬಿಸಿಸಿಐ ಮಹಿಳಾ ಐಪಿಎಲ್‌ಗೆ ದಾರಿ ಮಾಡಿಕೊಡಲು ತನ್ನ ಮಹಿಳಾ ದೇಶೀಯ ಕ್ರಿಕೆಟ್ ಕ್ಯಾಲೆಂಡರ್‌ನಲ್ಲಿ ಬದಲಾವಣೆಗಳನ್ನು ಮಾಡಲು ಮುಂದಾಗಿದೆ. ಸಾಮಾನ್ಯವಾಗಿ ನವೆಂಬರ್‌ನಿಂದ ಏಪ್ರಿಲ್‌ವರೆಗೆ ಮಹಿಳಾ ಕ್ರಿಕೆಟ್‌ ಪಂದ್ಯಾವಳಿಗಳು ನಡೆಯುತ್ತವೆ. ಈ ಬಾರಿ ಈ ಬಾರಿ ಒಂದು ತಿಂಗಳು ಮುಂಚಿತವಾಗಿ ಅಂದರೆ ಅಕ್ಟೋಬರ್ 11 ರಂದು T20 ಸ್ಪರ್ಧೆಯೊಂದಿಗೆ ಋತುವನ್ನು ಪ್ರಾರಂಭಿಸಿ, ಫೆ.2023 ರಲ್ಲಿ ಅಂತರ-ವಲಯ ODI ಸ್ಪರ್ಧೆಯೊಂದಿಗೆ ಕೊನೆಗೊಳಿಸಲಾಗುತ್ತಿದೆ. ಇದರಿಂದ ಮಾರ್ಚ್‌ ತಿಂಗಳಲ್ಲಿ ಮಹಿಳಾ ಐಪಿಎಲ್ ಆಯೋಜಿಸಲು ಸಮಯ ಲಭ್ಯವಾಗಲಿದೆ. ಈ ಪಂದ್ಯಾವಳಿ ಮುಗಿದ ನಂತರ ಪುರುಷರ ಐಪಿಎಲ್‌ ಆರಂಭವಾಗಲಿದೆ.
ಬಿಸಿಸಿಐ ಅಧ್ಯಕ್ಷ ಗಂಗೂಲಿ ಮುಂದಿನ ವರ್ಷ ಮಹಿಳಾ ಐಪಿಎಲ್ ನಡೆಯಲಿದೆ ಎಂದು ಫೆಬ್ರವರಿಯಲ್ಲಿ ಸುಳಿವು ನೀಡಿದ್ದರು. “ನಾವು ಪೂರ್ಣ ಪ್ರಮಾಣದ ಮಹಿಳಾ ಐಪಿಎಲ್‌ ಆಯೋಜಿಸಲು ಉತ್ಸುಕರಾಗಿದ್ದೇವೆ. 2023 ಪೂರ್ಣ ಪ್ರಮಾಣದ ಮಹಿಳಾ IPL ಅನ್ನು ಪ್ರಾರಂಭಿಸಲು ಉತ್ತಮ ಸಮಯ ಎಂದು ನಂಬುತ್ತೇನೆ. ಪುರುಷರ ಐಪಿಎಲ್ ಗೆ ಭವ್ಯವಾದ ಯಶಸ್ಸು ಸಿಕ್ಕಿರುವಂತೆ ಮಹಿಳಾ ಐಪಿಎಲ್‌ಗೂ ಯಶಸ್ಸು ಸಿಲಿದೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದ್ದರು.
5 ಅಥವಾ 6 ತಂಡಗಳೊಂದಿಗೆ ಮಹಿಳಾ ಐಪಿಎಲ್‌ ಆರಂಭಗೊಳ್ಳಲಿದೆ ಎನ್ನಲಾಗುತ್ತಿದೆ. ಐಪಿಎಲ್ ಫ್ರಾಂಚೈಸಿಗಳಾದ ರಾಜಸ್ಥಾನ್ ರಾಯಲ್ಸ್, ದಿ ನೈಟ್ ರೈಡರ್ಸ್ ಗ್ರೂಪ್ ಮತ್ತು ಬಾರ್ಬಡೋಸ್ ರಾಯಲ್ಸ್ ಮಹಿಳಾ ಐಪಿಎಲ್ ಟೂರ್ನಿಯಲ್ಲಿ ತಮ್ಮ ತಂಡವನ್ನು ಹೊಂದಲು ಈಗಾಗಲೇ ಆಸಕ್ತಿಯನ್ನು ವ್ಯಕ್ತಪಡಿಸಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!