ನವೋದ್ದಿಮೆಗಳಿಗೆ ಫಂಡಿಂಗ್ ಕೊರತೆಯ ಅವಧಿ ಇದು- ಹೇಗಿದೆ ಪರಿಸ್ಥಿತಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಾಗತಿಕವಾಗಿ ತಲೆದೂರಿರುವ ಹಣದುಬ್ಬರ, ಕ್ರಿಪ್ಟೋಕರೆನ್ಸಿಗಳ ಕುಸಿತ, ಷೇರುಮಾರುಕಟ್ಟೆಗಳ ಕುಣಿತ ಇತ್ಯಾದಿ ಕಾರಣಗಳಿಂದ ನವೋದ್ದಿಮೆಗಳು (ಸ್ಟಾರ್ಟೊ) ಬಂಡವಾಳದ ಕೊರತೆಯನ್ನು ಎದುರಿಸುತ್ತಿವೆ. ಹೊಸದಾಗಿ ಪ್ರಾರಂಭವಾದ ಉದ್ದಿಮೆಗಳಿಗೆ ಫಂಡಿಂಗ್‌ ಕೊರತೆ ಎದುರಾಗಿದೆ.

ಕೆಲ ವರದಿಗಳು ಹೇಳುವ ಪ್ರಕಾರ ಫಿನ್ಟೆಕ್, ಎಡ್ಟೆಕ್ ಮತ್ತು ಕ್ರಿಪ್ಟೋಕರೆನ್ಸಿಗಳಂತಹ ಹೂಡಿಕೆ ವಲಯಗಳು ಗರಿಷ್ಠ ಕುಸಿತವನ್ನು ಕಂಡಿರುವುದರಿಂದ ಕಳೆದ ಕೆಲವು ತಿಂಗಳುಗಳಲ್ಲಿ, ಸ್ಟಾರ್ಟ್ ಅಪ್‌ಗಳ ಮಾರ್ಕೆಟಿಂಗ್ ಖರ್ಚು ಸುಮಾರು 30-60 ಪ್ರತಿಶತದಷ್ಟು ಕಡಿಮೆಯಾಗಿದೆ.

ಸ್ಟಾರ್ಟ್-ಅಪ್‌ಗಳು ತಮ್ಮ ಸೀಮಿತ ಮಾರ್ಕೆಟಿಂಗ್ ಬಜೆಟ್‌ಗಳನ್ನು ಅಸ್ತಿತ್ವದಲ್ಲಿರುವ ಗ್ರಾಹಕರನ್ನು ರಿಟಾರ್ಗೆಟ್ ಮಾಡುವುದರ ಮೇಲೆ ಅಥವಾ ಅಗ್ಗದ ಕಿರು ವಿಡಿಯೋ ಅಪ್ಲಿಕೇಷನ್‌ ಗಳ ಮೇಲೆ ವ್ಯಯಿಸುತ್ತಿವೆ. ಪ್ರಸ್ತುತ ಜಾಗತಿಕವಾಗಿ ನಡೆಯುತ್ತಿರುವ ಹಣಕಾಸಿನ ಬಿಕ್ಕಟ್ಟು ಮತ್ತು ಇತರ ಆರ್ಥಿಕ ಹಿಂಜರಿತ ಕಾರಣಗಳಿಂದಾಗಿ ನವೋದ್ದಿಮೆಗಳಿಗೆ ಸವಾಲು ಎದುರಾಗಿದೆ.

ಕೆಲವು ಹಣಕಾಸು ತಂತ್ರಜ್ಞಾನಗಳು ಇನ್ನೂ ಭಾರತೀಯ ರಿಸರ್ವ್ ಬ್ಯಾಂಕ್‌ನ ಹೊಸ ಸಾಲದ ಮಾನದಂಡಗಳ ಸುತ್ತ ಗಿರಕಿ ಹೊಡೆಯುತ್ತಿವೆ. ಇದರ ಬೆನ್ನಲ್ಲೇ ಕ್ರಿಪ್ಟೋಕರೆನ್ಸಿಯು ಜಾಗತಿಕ ಕುಸಿತ ಜೊತೆಗೆ ಭಾರತದಲ್ಲಿ ಪರಿಚಯಿಸಲಾದ ಹೊಸ ತೆರಿಗೆಗಳು ಮತ್ತು ಜಾರಿ ನಿರ್ದೇಶನಾಲಯದ ತನಿಖೆ ಹಾಗೂ ಉನ್ನತ ವಿನಿಮಯ ಕೇಂದ್ರಗಳಲ್ಲಿ ಒಂದಾದ WazirX ನ ಬ್ಯಾಂಕ್ ಸ್ವತ್ತುಗಳ ಮೇಲೆ ನಿರ್ಬಂಧ ಹೇರಿರುವುದರಿಂದ ಕ್ರಿಪ್ಟೋ ಮಾರುಕಟ್ಟೆಯು ನೆಲಕಚ್ಚಿದೆ.

ಇನ್ನು ಎಡ್ಟೆಕ್ ಕೂಡ ವಿಭಿನ್ನ ಸಮಸ್ಯೆಗಳ ಸುಳಿಯಲ್ಲಿದ್ದು ಕಳೆದ ಒಂದೂವರೆ ವರ್ಷಗಳಲ್ಲಿ ನಡೆದ ದೊಡ್ಡ ಪ್ರಮಾಣದ ನೇಮಕಾತಿ, ಸ್ವಾಧೀನಗಳು ಮತ್ತು ಹೆಚ್ಚುತ್ತಿರುವ ಬೇಡಿಕೆ ಮತ್ತು ಸೀಮಿತ ಹಣಕಾಸು ನಿಧಿಗಳಿಂದಾಗಿ ಹಿನ್ನಡೆ ಅನುಭವಿಸುತ್ತಿವೆ. ಕೆಲ ಉನ್ನತ ಸಂಸ್ಥೆಗಳು ತಮ್ಮ ಕಾರ್ಯಾಚರಣೆಗಳನ್ನು ಹಿಂತೆಗೆದುಕೊಳ್ಳುತ್ತಿವೆ ಜೊತೆಗೆ ನೇಮಕಾತಿ ತಡೆ ಮುಂತಾದ ಕ್ರಮಗಳ ಮೊರೆ ಹೋಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!