October 17, 2026
Saturday, October 17, 2026
spot_img

Be Aware | ಬಾಳೆ ಎಲೆ ಬಿಟ್ಟು ಪೇಪರ್ ಪ್ಲೇಟ್ ಬೆನ್ನತ್ತಿದ್ದೀರಾ? ಹಾಗಾದ್ರೆ ಈ ವಿಷಯ ನಿಮಗೂ ಗೊತ್ತಿರಲಿ

ಇಂದಿನ ವೇಗದ ಜಗತ್ತಿನಲ್ಲಿ ಪೇಪರ್ ಪ್ಲೇಟ್‌ಗಳ ಬಳಕೆ ಅನಿವಾರ್ಯದಂತಾಗಿದೆ. ಶುಭ ಸಮಾರಂಭಗಳಿಂದ ಹಿಡಿದು ಬೀದಿ ಬದಿಯ ಆಹಾರದವರೆಗೆ ಎಲ್ಲೆಡೆ ಇವುಗಳದ್ದೇ ಹವಾ. ಆದರೆ, ಪೇಪರ್ ಪ್ಲೇಟ್‌ನಲ್ಲಿ ಊಟ ಮಾಡುವುದು ಕೇವಲ ಸೌಕರ್ಯವೋ ಅಥವಾ ಆರೋಗ್ಯಕ್ಕೆ ಸಂಚಕಾರವೋ ಎಂಬ ಚರ್ಚೆ ಈಗ ಮುನ್ನೆಲೆಗೆ ಬಂದಿದೆ.

ಹೆಚ್ಚಿನ ಪೇಪರ್ ಪ್ಲೇಟ್‌ಗಳು ನೀರು ಅಥವಾ ಎಣ್ಣೆ ಸೋರದಂತೆ ತಡೆಯಲು ಮೈಕ್ರೋ-ಪ್ಲಾಸ್ಟಿಕ್ ಅಥವಾ ಪ್ಲಾಸ್ಟಿಕ್ ಲೇಯರ್ ಅನ್ನು ಹೊಂದಿರುತ್ತವೆ. ಬಿಸಿಯಾದ ಸಾಂಬಾರ್ ಅಥವಾ ಪದಾರ್ಥಗಳನ್ನು ಈ ಪ್ಲೇಟ್‌ಗೆ ಬಡಿಸಿದಾಗ, ಆ ಉಷ್ಣತೆಗೆ ಪ್ಲಾಸ್ಟಿಕ್ ಕರಗಿ ಆಹಾರದೊಂದಿಗೆ ಬೆರೆತು ನಮ್ಮ ಹೊಟ್ಟೆ ಸೇರುತ್ತದೆ. ಇದು ದೀರ್ಘಕಾಲದಲ್ಲಿ ಹಾರ್ಮೋನ್ ಏರುಪೇರು ಮತ್ತು ಜೀರ್ಣಕ್ರಿಯೆಯ ತೊಂದರೆಗಳಿಗೆ ಕಾರಣವಾಗಬಹುದು.

ಪರ್ಯಾಯವೇನು?

ನಮ್ಮ ಹಳೆಯ ಸಂಪ್ರದಾಯದಂತೆ ಬಾಳೆ ಎಲೆ, ಮುತ್ತುಗದ ಎಲೆ ಅಥವಾ ಅಡಿಕೆ ಮರದ ಹಾಳೆಗಳಿಂದ ಮಾಡಿದ ತಟ್ಟೆಗಳನ್ನು ಬಳಸುವುದು ಅತ್ಯಂತ ಸುರಕ್ಷಿತ. ಇವು ಪರಿಸರ ಸ್ನೇಹಿ ಮಾತ್ರವಲ್ಲದೆ, ಆರೋಗ್ಯಕ್ಕೂ ಪೂರಕ.

ಒಟ್ಟಿನಲ್ಲಿ, ನಾವು ಪೇಪರ್ ಪ್ಲೇಟ್ ಮೊರೆ ಹೋಗುವ ಮುನ್ನ, ಅದು ನಮ್ಮ ದೇಹದ ಮೇಲೆ ಬೀರುವ ಪರಿಣಾಮದ ಬಗ್ಗೆ ಯೋಚಿಸುವುದು ಅತ್ಯಗತ್ಯ.

Must Read