ಜನವರಿ 1 ರಿಂದ ಜಾರಿಗೆ ಬರಲಿರೋ ಈ ಬದಲಾವಣೆಗಳ ಬಗ್ಗೆ ನಿಮಗೆ ತಿಳಿದಿರಲಿ !

ಹೊಸದಿಗಂತ‌ ಡಿಜಿಟಲ್ ಡೆಸ್ಕ್:

ಹೊಸ ಕ್ಯಾಲೆಂಡರ್ ವರ್ಷ 2023 ಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳಿನಿಂದ ಹೊಸ ಕ್ಯಾಲೆಂಡರ್ ವರ್ಷದೊಂದಿಗೆ ಕೆಲವು‌ ಹೊಸ ನಿಯಮಗಳೂ ಕೂಡ ಜಾರಿಗೆ ಬರಲಿವೆ. ಬ್ಯಾಂಕ್ ಲಾಕರ್ ನಿಂದ ಕ್ರೆಡಿಟ್ ಕಾರ್ಡ್ ವರಗೆ ಹಲವು ನಿಯಮಗಳು ಜನವರಿ 1 ರಿಂದ ಜಾರಿಗೆ ಬರಲಿದ್ದು‌ ಜನಸಾಮಾನ್ಯನ ವೈಯುಕ್ತಿಕ‌ ಹಣಕಾಸು‌‌ ವಿಷಯದ ಮೇಲೆ ಪರಿಣಾಮ ಬೀರುವ ಈ ನಿಯಮಗಳ ಬಗ್ಗೆ ನೀವು ಅವಶ್ಯವಾಗಿ ತಿಳಿದುಕೊಳ್ಳಲೇ ಬೇಕು. ಅವುಗಳ‌ ಕುರಿತಾದ ಚಿಕ್ಕ ಮಾಹಿತಿ‌ ಇಲ್ಲಿದೆ.

ರಾಷ್ಟ್ರೀಯ ಪಿಂಚಣಿ ವ್ಯವಸ್ಠೆ: ಪಿಂಚಣಿಗಳ ಭಾಗಶಃ ಹಿಂಪಡೆಯುವಿಕೆಗೆ ಕೇಂದ್ರ ಸರ್ಕಾರಿ ನೌಕರರು NPS (ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ) ಗೆ ತಮ್ಮ ಅರ್ಜಿಯನ್ನು ಸಂಬಂಧಿತ ನೋಡಲ್ ಕಚೇರಿಗಳ ಮೂಲಕ ಸಲ್ಲಿಸಬೇಕಾಗುತ್ತದೆ. ಭಾಗಶಃ ಹಿಂಪಡೆಯುವಿಕೆಗೆ ಅಗತ್ಯ ಕಾರಣಗಳ‌ ಜೊತೆಗೆ ಅವುಗಳ‌ನ್ನು‌ ದೃಢೀಕರಿಸಲು ಅಗತ್ಯ ದಾಖಲೆಗಳನ್ನೂ ನೀಡಬೇಕಾಗುತ್ತದೆ. ಈ ನಿಯಮ ಜನವರಿ 1 ರಿಂದ ಜಾರಿಗೆ ಬರಲಿದ್ದು ಈ‌ ಹಿಂದೆ
ಪ್ರಸ್ತುತ, ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಸದಸ್ಯರಿಗೆ ಸ್ವಯಂ ಘೋಷಣೆಯ ಮೂಲಕ NPS ಅಡಿಯಲ್ಲಿ ಭಾಗಶಃ ಹಿಂಪಡೆಯಲು ಅವಕಾಶ ನೀಡುತ್ತಿತ್ತು. ಇನ್ನು ಮುಂದೆ ಅದಕ್ಕೆ ಅಗತ್ಯವಾದ ಪೋಷಕ‌ ದಾಖಲೆಗಳನ್ನೂ‌ ನೀಡಬೇಕಾಗುತ್ತದೆ

ಬ್ಯಾಂಕ್ ಲಾಕರ್‌ಗಳು: ಬ್ಯಾಂಕ್ ಲಾಕರ್ ಗಳ ನಿಯಮಾವಳಿಗಳಿಗೆ ಆರ್ ಬಿ ಐ ತಿದ್ದುಪಡಿ ಮಾಡಿದ್ದು ಬ್ಯಾಂಕ್ ಲಾಕರ್ ನಿಯಮಗಳ ಅಡಿಯಲ್ಲಿ, ಗ್ರಾಹಕರಿಗೆ ನವೀಕರಿಸಿದ ಲಾಕರ್ ಒಪ್ಪಂದಗಳನ್ನು ಒದಗಿಸಲು ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ. ಆರ್‌ಬಿಐ ಅಧಿಸೂಚನೆಯ ಪ್ರಕಾರ, ಲಾಕರ್ ಒಪ್ಪಂದಗಳಲ್ಲಿ ಯಾವುದೇ ಅನ್ಯಾಯದ ನಿಯಮಗಳು ಅಥವಾ ಷರತ್ತುಗಳನ್ನು ಅಳವಡಿಸಲಾಗಿಲ್ಲ ಎಂದು ಬ್ಯಾಂಕ್‌ಗಳು ಖಚಿತಪಡಿಸಬೇಕಾಗುತ್ತದೆ.

ಹೆಚ್ಚಿನ ಭದ್ರತೆಯ ನೋಂದಣಿ ಫಲಕಗಳು: ಏಪ್ರಿಲ್ 1, 2019 ರ ಮೊದಲು ನೋಂದಾಯಿಸಲಾದ ವಾಹನಗಳಿಗೆ, ಡಿಸೆಂಬರ್ 31 ರೊಳಗೆ ಹೈ-ಸೆಕ್ಯುರಿಟಿ ನೋಂದಣಿ ಪ್ಲೇಟ್‌ಗಳು (HSRP) ಮತ್ತು ಬಣ್ಣ-ಕೋಡೆಡ್ ಸ್ಟಿಕ್ಕರ್‌ಗಳನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಹಾಗೆ ಮಾಡಲು ವಿಫಲವಾದರೆ 5,000 ರಿಂದ 10,000 ರೂ. ವರೆಗೆ ದಂಡ ವಿಧಿಸಲಾಗುತ್ತದೆ.

ಕ್ರೆಡಿಟ್ ಕಾರ್ಡ್‌ಗಳು: ಕ್ರೆಡಿಟ್ ಕಾರ್ಡ್ ಪಾವತಿಗಳಿಗಾಗಿ, ಹೊಸ ವರ್ಷದಲ್ಲಿ ಹಲವಾರು ಬ್ಯಾಂಕ್‌ಗಳು ತಮ್ಮ ರಿವಾರ್ಡ್ ಪಾಯಿಂಟ್ ಯೋಜನೆಯನ್ನು ಬದಲಾಯಿಸುವ ಸಾಧ್ಯತೆಯಿದೆ. ಆದ್ದರಿಂದ, ಗ್ರಾಹಕರು ತಮ್ಮ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳನ್ನು ಡಿಸೆಂಬರ್ 31 ರೊಳಗೆ ರಿಡೀಮ್ ಮಾಡಿಕೊಳ್ಳಬೇಕು.

ಗ್ಯಾಸ್ ಸಿಲಿಂಡರ್ ಬೆಲೆಗಳು: ಗ್ಯಾಸ್ ಸಿಲಿಂಡರ್ ಬೆಲೆಗಳಲ್ಲಿ  ಬದಲಾವಣೆಗಳನ್ನು ಮಾಡುವುದಿದ್ದರೆ ಪ್ರತಿ ತಿಂಗಳ ಮೊದಲ ದಿನದಂದು ಘೋಷಿಸಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!