ಹೊಸ ವರ್ಷಾಚರಣೆಗೆ ಮನಾಲಿಯತ್ತ ಜನರ ದಂಡು: ಕಿಲೋಮೀಟರ್‌ ಗಟ್ಟಲೆ ಟ್ರಾಫಿಕ್ ಜಾಮ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಿಮಾಚಲ ಪ್ರದೇಶದ ಮನಾಲಿಗೆ ಶನಿವಾರ ಹೊಸ ವರ್ಷವನ್ನು ಆಚರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ನಗರಕ್ಕೆ ಆಗಮಿಸಿದ್ದರಿಂದ ಭಾರಿ ಟ್ರಾಫಿಕ್ ಜಾಮ್‌ಗೆ ಸಾಕ್ಷಿಯಾಯಿತು.

ಹೊಸ ವರ್ಷದ ಮುನ್ನಾದಿನದ ವಾಹನ ದಟ್ಟಣೆಯಿಂದಾಗಿ ಹಲವಾರು ಪ್ರದೇಶಗಳಲ್ಲಿ ಟ್ರಾಫಿಕ್ ಚಲನೆಯ ಮೇಲೆ ಪರಿಣಾಮ ಬೀರಿದ್ದು, ರಸ್ತೆಗಳು ಕಾರುಗಳಿಂದ ತುಂಬಿದ್ದವು.

ಮನಾಲಿಯು ಹೊಸ ವರ್ಷದ ಸಮಯದಲ್ಲಿ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ, ಏಕೆಂದರೆ ಬಯಲು ಸೀಮೆಯ ಜನರು ತಮ್ಮ ಹೊಸ ವರ್ಷವನ್ನು ಬೆಟ್ಟಗಳಲ್ಲಿ ಚಳಿಗಾಲದ ಹಿಮವನ್ನ ಆನಂದಿಸುತ್ತಾ ಹೊಸ ವರ್ಷವನ್ನು ಸ್ವಾಗತಿಸಲು ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ರಸ್ತೆಯಲ್ಲಿ ಕಿಲೋಮಿಟರ್‌ ಗಟ್ಟಲೆ ವಾಹನ ನಿಂತಲ್ಲೇ ನಿಂತಿದ್ದು, ಪ್ರಯಾಣಿಕರು ಪರದಾಡುವ ಸ್ಥಿತಿ ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!