BE CALM | ನಿಮ್ಮ ಮನಸ್ಸು ಶಾಂತಚಿತ್ತವನ್ನು ರೂಢಿಸಿಕೊಂಡರೆ, ಎಲ್ಲಾ ಕೆಲಸವೂ ಸಾಧ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಮ್ಮ ಮನಸ್ಸು ನಮಗೆ ಒಳ್ಳೇದು ಮಾಡಿದ್ರೆ ಸಾಕು. ಏನಂತೀರಾ? ಈ ಮಾತು ಇತ್ತೀಚಿನ ದಿನಗಳಲ್ಲಿ ಕೇಳಿರ್ತಿರಾ, ಇದು ತಮಾಷೆ ಮಾತಾದರು ಅದರಲ್ಲೂ ಸತ್ಯ ಇದೆ. ನಮ್ಮ ಮನಸ್ಸು ಎಷ್ಟು ಶಾಂತ ರೀತಿಯಲ್ಲಿ ಇರುತ್ತೋ ಅಷ್ಟು ಒಳ್ಳೇದು. ಆದರೆ ಈಗಿನ ದಿನನಿತ್ಯದ ಜೀವನ ಶೈಲಿಯಲ್ಲಿ
ಮನಃಶಾಂತಿ ಅನ್ನೋ ಪದ ಮರೆತು ಹೋಗಿದ್ದಾರೆ. ಮನಸ್ಸಿದ್ದರೆ ಮಾರ್ಗ ಅದೇ ರೀತಿ ಪ್ರಯತ್ನ ಪಟ್ಟರೆ ಎಲ್ಲವೂ ಸಾಧ್ಯ.

Walking Alone Stock Photos, Images and Backgrounds for Free Download

ನಿಮಗೆ ಒಂಟಿ ತನ ಕಾಡುತ್ತಿದೆ, ಯಾಕೋ ಬೇಜಾರು ಅನಿಸಿದ್ರೆ ಒಂದು ವಾಕ್ ಹೋಗಿಬನ್ನಿ. ಪರಿಸ್ಥಿತಿಯನ್ನು ನಿಭಾಯಿಸಲು ಕಷ್ಟವಾದಾಗ, ಕೋಪ ಬಂದಾಗ, ಹಾಗೆ ಸುಮ್ಮನೆ ಒಂದು ವಾಕ್ ಹೋಗಿ ಬನ್ನಿ.

The Power of Doing Nothing: How Meditation Restores Clarity and Reflection

ಮನಸ್ಸನ್ನು ಖುಷಿಯಾಗಿ, ಆರೋಗ್ಯವಾಗಿ, ಸಮತೋಲನದಲ್ಲಿ ಇಡಬೇಕಾದರೆ ಪ್ರತಿನಿತ್ಯ ಬೆಳಗ್ಗೆ ವ್ಯಾಯಾಮ, ಯೋಗ, ಮೆಡಿಟೇಶನ್ ಅಭ್ಯಾಸ ಮಾಡಿಕೊಳ್ಳಿ. ಬೆಳಗ್ಗೆ ಸಮಯ ಶುದ್ಧ ಗಾಳಿ ಸೇವನೆಯಿಂದನಮ್ಮ ದೇಹಕ್ಕೂ, ಮನಸ್ಸಿಗೂ ಉತ್ತಮ ಪ್ರಯೋಜನ ದೊರೆಯುತ್ತದೆ.

Diary Writing: Importance of Diary Writing

ನಿಮ್ಮ ಆಲೋಚನೆಗಳು, ನಿರಾಶೆಗಳು, ನಿಮ್ಮನ್ನು ಆಘಾತಗೊಳಿಸಿದ ಘಟನೆಗಳು, ನಿಮ್ಮ ತಲೆಯಲ್ಲಿ ಓಡುತ್ತಿರುವ ಯಾವುದೇ ವಿಚಾರಗಳನ್ನು ಪ್ರತಿದಿನ ನಿಮ್ಮ ಡೈರಿಯಲ್ಲಿ ಬರೆಯಿರಿ. ಇದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ನಿಮ್ಮ ಮನಸ್ಸಿನ ಭಾರ ಕಡಿಮೆಯಾಗಿ, ಮನಸ್ಸು ಶಾಂತವಾಗಿ ಮುಂದಿನ ಆಲೋಚನೆಗೆ ದಾರಿ ಮಾಡಿಕೊಡುತ್ತದೆ.

Listen To Music

ಮನಸ್ಸನ್ನು ಶಾಂತಗೊಳಿಸುವ ಅದ್ಭುತ ಶಕ್ತಿ ಸಂಗೀತಕ್ಕಿದೆ. ಸಂಗೀತವನ್ನು ಆಲಿಸುವ ಅಭ್ಯಾಸ ಮಾಡಿಕೊಂಡರೆ ಎಂದಿಗೂ ಒಂಟಿತನ ಕಾಡುವುದಿಲ್ಲ. ಆದರೆ ಬೇಸರದ ಹಾಡನ್ನು ಕೇಳಬೇಡಿ ಬದಲಿಗೆ ಸಂತೋಷದ, ಸುಮಧುರವಾದ ಹಾಡುಗಳನ್ನು ಕೇಳಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!