ವಾಟರ್ ಬಾಟಲ್ ಖರೀದಿಸುವ ಮುನ್ನ ಎಚ್ಚರ: ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಆರೋಗ್ಯ ಸಚಿವರು!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ರಾಜ್ಯದ ಜನತೆಗೆ ಅರೋಗ್ಯ ಇಲಾಖೆ ಆಘಾತಕಾರಿ ಮಾಹಿತಿ ಒಂದು ನೀಡಿದ್ದು, ಅದೇನೆಂದರೆ , ಬಾಟಲ್ ಮೂಲಕ ಪೂರೈಕೆ ಆಗುವ ಕುಡಿಯುವ ನೀರು ಶೇಕಡ 50ರಷ್ಟು ಕಳಪೆ ಎಂದು ವರದಿ ತಿಳಿಸಿದೆ.

ಈ ಕುರಿತು ವಿಕಾಸಸೌಧದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಹತ್ತರ ಸುದ್ದಿಗೋಷ್ಠಿ ನಡೆಸಿದ್ದಾರೆ. ಈಗಾಗಲೇ 296 ಕುಡಿಯುವ ನೀರಿನ ಬಾಟಲ್ ಮಾದರಿಗಳ ಟೆಸ್ಟ್ ಮಾಡಿದ್ದು, ಇದರಲ್ಲಿ72 ಸುರಕ್ಷಿತ ಹಾಗೂ 95 ಮಾದರಿಗಳು ಅಸುರಕ್ಷಿತ ಎಂದು ವರದಿಯಾಗಿದೆ. ಇದಲ್ಲದೇ ಹಸಿರು ಬಟಾಣಿಗೆ ಹಸಿರು ಕಲರ್‌ ಬರಿಸಲು ಟೆಟಾರ್ಜಿನ್‌ ಕೆಮಿಕಲ್‌ ಬಳಸಿರುವ ಆತಂಕಕಾರಿ ವಿಷಯ ಹೊರಬಿದ್ದಿದೆ. ಕುಡಿಯುವ ನೀರಿನ ಬಾಲಿ ಮಾತ್ರವಲ್ಲದೇ ಖಾರ ಮಿಕ್ಚರ್, ಪನ್ನೀರ್ ಹಾಗೂ ಐಸ್​ಕ್ರೀಂ ಘಟಕಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಆಹಾರ ಸುರಕ್ಷತೆ ಸಂಬಂಧಿಸಿದಂತೆ ಫೆಬ್ರವರಿಯಲ್ಲಿ 296 ಮಾದರಿಗಳ ವಾಟರ್‌ ಬಾಟಲ್‌ಗಳ ತಪಾಸಣೆ ಮಾಡಲಾಗಿದೆ . 75 ಮಾದರಿಗಳು ಸುರಕ್ಷಿತ, 95 ಅಸುರಕ್ಷಿತ, 88 ಕಳಪೆ ಗುಣಮಟ್ಟದ ಬಾಟೆಲ್‌ಗಳು ಅಂತ ಗುರುತಿಸಲಾಗಿದೆ. ಕೆಮಿಕಲ್, ಬಯೋಗ್ರಾಫಿಕಲ್ ರಿಪೋರ್ಟ್ ಕೂಡ ಬಂದಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಮಾರ್ಚ್​ನಲ್ಲಿ 3204 ಆಹಾರ ಪದಾರ್ಥಗಳ ಮಾದರಿಗಳನ್ನ ಸಂಗ್ರಹಿಸಿ ಟೆಸ್ಟಿಂಗ್ ಮಾಡಲಾಗಿದೆ. ತುಪ್ಪದ 49 ಮಾದರಿಗಳಲ್ಲಿ 6 ಮಾದರಿಗಳ ತಪಾಸಣೆ ಪೂರ್ಣಗೊಂಡಿದೆ. ಎಲ್ಲಾ ಮಾದರಿಗಳು ಸುರಕ್ಷಿತ ಎಂಬ ವರದಿ ಬಂದಿದೆ. ಖೋವಾಗಳ 43 ಮಾದರಿಗಳಲ್ಲಿ 9 ಮಾದರಿಗಳ ಟೆಸ್ಟಿಂಗ್ ರಿಪೋರ್ಟ್ ಬಂದಿದೆ. ಮೂರು ಕಳಪೆ ಗುಣಮಟ್ಟ, ಆರು ಮಾದರಿಗಳು ಅಸುರಕ್ಷಿತ ಎಂದು ವರದಿ ಬಂದಿದೆ.

ಅದೇ ರೀತಿ ಪನ್ನೀರ್‌ಗಳ 231 ಮಾದರಿಗಳನ್ನು ತಪಾಸಣೆ ಮಾಡಲಾಗಿದೆ ಅ32 ಮಾದರಿಗಳ ತಪಾಸಣೆ ಮುಗಿದಿದೆ. 2 ಮಾದರಿಗಳು ಅಸುರಕ್ಷಿತ, 30 ಮಾದರಿಗಳು ಸುರಕ್ಷಿತ ಎಂಬ ವರದಿ ಬಂದಿದೆ ಎಂದು ಸಚಿವ ಗುಂಡೂರಾವ್​ ಹೇಳಿದ್ದಾರೆ.

ಹುರಿದ ಹಸಿರು ಬಟಾಣಿಗಳಲ್ಲಿ ಕೃತಕ ಬಣ್ಣಗಳ ಬಳಕೆಯನ್ನು ಪರಿಶೀಲಿಸಲು 115 ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಕಳುಹಿಸಲಾಗಿದೆ. ಇವುಗಳಲ್ಲಿ 46 ಮಾದರಿಗಳು ಸುರಕ್ಷಿತವೆಂದು ಕಂಡುಬಂದರೆ, 69 ಮಾದರಿಗಳು ಅಸುರಕ್ಷಿತವೆಂದು ಕಂಡುಬಂದಿದೆ. ಉಳಿದ ಮಾದರಿಗಳ ವಿಶ್ಲೇಷಣೆ ಇನ್ನೂ ನಡೆಯುತ್ತಿದೆ ಎಂದು ಅವರು ಹೇಳಿದರು.

ಹುರಿದ ಹಸಿರು ಬಟಾಣಿ ಮಾದರಿಗಳಲ್ಲಿ ಸುಮಾರು 60 ಪ್ರತಿಶತ ಅಸುರಕ್ಷಿತವಾಗಿವೆ ಎಂದು ಗಮನಿಸಿದ ಅವರು, ನಿಷೇಧಿತ ಕೃತಕ ಬಣ್ಣ ಬಳಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಇವುಗಳ ಜೊತೆಗೆ 1891 ಔಷಧ ಮಾದರಿಗಳ ತಪಾಸಣೆ ಮಾಡಲಾಗಿದ್ದು. ಅದ್ರಲ್ಲಿ1298 ಗುಣಮಟ್ಟದ ಔಷಧಗಳು, 41 ಉತ್ತಮವಲ್ಲದ ಗುಣಮಟ್ಟದ ಔಷಧಗಳೆಂದು ಗುರುತಿಸಲಾಗಿದೆ. 41 ಔಷಧ ಕಂಪನಿಗಳ ವಿರುದ್ದ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡುತ್ತೇವೆ. ಫೆಬ್ರವರಿಯಲ್ಲಿ 10, ಮಾರ್ಚ್‌‌ನಲ್ಲಿ 18 ಮೊಕದ್ದಮೆ ದಾಖಲಾಗಿದೆ ಎಂದು ಆರೋಗ್ಯ ಸಚಿವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!