ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾಟ್ಸಾಪ್‌ನಲ್ಲಿ ಮೆಸೇಜ್ ಮಾಡುವಾ ಇಮೋಜಿಗಳ ಬಳಕೆ ಹೆಚ್ಚು ಮಾಡ್ತೀರಾ? ಇಮೋಜಿಗಳಲ್ಲೇ ಮಾತನಾಡ್ತೀರಾ? ಹಾಗಿದ್ರೆ ಈ ಸುದ್ದಿ ನೀವು ಓದಲೇಬೇಕು..
ಹೆಣ್ಮಕ್ಕಳಿಗೆ ರೆಡ್ ಹಾರ್ಟ್ ಇಮೋಜಿಯನ್ನು ಕಳಿಸಿದ್ರೆ ಜೈಲು ಸೇರಬೇಕಾಗುತ್ತದೆ. ನಂಬೋಕಾಗ್ತಿಲ್ವಾ? ನಾವು ಆಗಾಗ ಕಳಿಸ್ತೇವೆ ಜೈಲಿಗೆ ಹೋಗಿಲ್ಲ ಅಂತ ಯೋಚನೆ ಮಾಡ್ತಿದ್ದೀರಾ? ಈ ನಿಯಮ ಇರೋದು ನಮ್ಮ ದೇಶದಲ್ಲಲ್ಲ, ಕುವೈತ್ ಹಾಗೂ ಸೌದಿ ಅರೇಬಿಯಾದಲ್ಲಿ!
ಹೌದು, ಹೆಣ್ಣುಮಕ್ಕಳಿಗೆ ಮಿಸ್ ಆಗಿ ಹಾರ್ಟ್ ಇಮೋಜಿ ಕಳಿಸಿದರೂ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಯಾವ ಸಾಮಾಜಿಕ ಜಾಲತಾಣಗಳಲ್ಲಿಯೂ ಹಾರ್ಟ್ ಇಮೋಜಿ ಕಳಿಸುವಂತಿಲ್ಲ, ಕಳಿಸಿದವರನ್ನು ಅಪರಾಧಿಗಳು ಎಂದು ಪರಿಗಣಿಸಲಾಗುತ್ತದೆ.
ಮೆಸೇಜ್ ಕಳಿಸಿದ ಹುಡುಗರ ವಿರುದ್ಧ ಹುಡುಗಿಯರು ದೂರು ನೀಡಿದರೆ ಅದನ್ನು ಕಿರುಕುಳ ಎಂದು ಪರಿಗಣಿಸಲಾಗುತ್ತದೆ. ಜೈಲಿಗೆ ಹೋಗಿ ಬಂದು ಮತ್ತೆ ಇಮೋಜಿ ಕಳಿಸಿದರೆ ಐದು ವರ್ಷ ಜೈಲು ಪಕ್ಕಾ!