ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಬೈಕ್‌ನಲ್ಲಿ ಬಂದು ಸರಗಳ್ಳತನ ಮಾಡುವುದು ಮಾಮೂಲಿಯಾಗಿಬಿಟ್ಟಿದೆ. ಆದರೆ ಈಗ ಶ್ವಾನ ಕಳ್ಳತನ ಕೂಡ ಶುರುವಾಗಿದೆ.
ಹೌದು! ಬೆಂಗಳೂರಿನ ಜಯನಗರದಲ್ಲಿ ಇಂತಹುದೇ ಒಂದು ಘಟನೆ ನಡೆದಿದ್ದು ಮಹಿಳೆಯೊಬ್ಬರು ತನ್ನ ನಾಯಿಯನ್ನು ಮುಂಜಾನೆ ವಾಯುವಿಹಾರಕ್ಕೆ ಕರೆದುಕೊಂಡು ಬಂದಿದ್ದಾಗ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು , ನಾಯಿಯನ್ನು ಹೊತ್ತುಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ.
ನಾಯಿಯ ಮಾಲಕಿ ಸಮೀಪದ ಪೊಲೀಸ್ ಠಾಣೆಗೆ ಭೇಟಿ ನೀಡಿ ಸಹಾಯ ಕೇಳಿದ್ದಾರೆ. ಅಲ್ಲದೇ ತಿಲಕ್‌ನಗರ ಠಾಣೆಯಲ್ಲಿ ಈ ಬಗ್ಗೆ ಎಫ್‌ಐಆರ್ ಕೂಡ ದಾಖಲಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಈ ಶ್ವಾನದ ಬೆಲೆ 10 ಸಾವಿರ ರೂಪಾಯಿಗಳು ಎಂದು ತಿಳಿದು ಬಂದಿದೆ.
ವರದಿಗಳ ಪ್ರಕಾರ ಈ ಘಟನೆ ಫೆಬ್ರವರಿ 12ರಂದು ನಡೆದಿದೆ ಎನ್ನಲಾಗುತ್ತಿದ್ದು, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗುತ್ತಿದೆ.