ಟ್ರಂಪ್ ನೀತಿ ವಿರುದ್ಧ ಸಿಡಿದೆದ್ದ ಲಕ್ಷಾಂತರ ಜನರು: ಬೀದಿಗಿಳಿದು ನಡೆಸಿದ್ರು ಪ್ರತಿಭಟನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದಲ್ಲಿ ನೀತಿಗಳನ್ನು ವಿರೋಧಿಸಿ ಜನರು ಬೀದಿಗಿಳಿದಿದ್ದಾರೆ. ಸರ್ಕಾರಿ ನೌಕರರ ಕಡಿತ, ವ್ಯಾಪಾರ ತೆರಿಗೆ ಮತ್ತು ನಾಗರಿಕ ಹಕ್ಕುಗಳ ಉಲ್ಲಂಘನೆ ಸೇರಿದಂತೆ ಹಲವು ಟ್ರಂಪ್ ಅವರ ನೀತಿಗಳನ್ನು ವಿರೋಧಿಸಿ ವಾಷಿಂಗ್ಟನ್, ನ್ಯೂಯಾರ್ಕ್, ಹೂಸ್ಟನ್, ಫ್ಲೋರಿಡಾ, ಕೊಲೊರಾಡೋ ಮತ್ತು ಲಾಸ್ ಏಂಜಲೀಸ್ ಸೇರಿದಂತೆ ಹಲವು ಕಡೆಗಳಲ್ಲಿ ಲಕ್ಷಾಂತರ ಜನ ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಎರಡನೇ ಬಾರಿ ಅಮೆರಿಕ ಗದ್ದುಗೆ ಏರಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೂರೇ ತಿಂಗಳಿಗೆ ಅಲ್ಲಿನ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಅಮೆರಿಕದ 50 ರಾಜ್ಯಗಳ ಲಕ್ಷಾಂತರ ಜನರು ಬೀದಿಗಳಿದು ಟ್ರಂಪ್‌ ವಿರುದ್ಧ ಪ್ರತಿಭಟನೆ ನಡೆಸಿದರು.

ಪ್ರಪಂಚದಾದ್ಯಂತದ ಹೆಚ್ಚಿನ ದೇಶಗಳ ಮೇಲೆ ಅಮೆರಿಕ ಆಮದು ಸುಂಕಗಳನ್ನು ವಿಧಿಸುವುದಾಗಿ ಟ್ರಂಪ್ ಘೋಷಿಸಿದ ಕೆಲವು ದಿನಗಳ ನಂತರ, ಲಂಡನ್, ಪ್ಯಾರಿಸ್ ಮತ್ತು ಬರ್ಲಿನ್‌ ರಾಜ್ಯದ ಪ್ರಮುಖರು ಸಭೆ ನಡೆಸಿ, ಪ್ರತಿಭಟನೆ ನಡೆಸಲು ಮುಂದಾದರು.

ನಮಗೆ ಟ್ರಂಪ್‌ನ ಹುಚ್ಚುತನ ನೀತಿ ನಮಗೆ ಸಿಟ್ಟು ತರಿಸಿದೆ. ಆತನ ಯಾವ ನಿಯಮವೂ ಅರ್ಥವೇ ಆಗುತ್ತಿಲ್ಲ. ಬಿಳಿಯರ ಅತ್ಯಾಚಾರಿಗಳ ಗುಂಪೊಂದು ನಮ್ಮನ್ನು ನಿಯಂತ್ರಿಸುತ್ತಿದೆ. ದೇಶವನ್ನು ಆಳ್ವಿಕೆ ಮಾಡುತ್ತಿದೆ. ಇದು ಒಳ್ಳೆಯದಲ್ಲ ಎಂದು ನ್ಯೂಯಾರ್ಕ್‌ನ ವ್ಯಂಗ್ಯ ಚಿತ್ರಕಾರ ಶೈನಾ ಕೆಸ್ನರ್ ಹೇಳಿದರು.

ವಾಷಿಂಗ್ಟನ್‌ನಲ್ಲಿ ಸಾವಿರಾರು ಪ್ರತಿಭಟನಾಕಾರರು ರಾಷ್ಟ್ರೀಯ ಮಾಲ್‌ನಲ್ಲಿ ಜಮಾಯಿಸಿ ಟ್ರಂಪ್ ವಿರುದ್ಧ ಪ್ರತಿಭಟನೆ ನಡೆಸಿದರು. ಡೊನಾಲ್ಡ್‌ ಟ್ರಂಪ್‌ ನೀತಿಯಿಂದಾಗಿ ನಾವು ನಮ್ಮ ಮಿತ್ರ ರಾಷ್ಟ್ರಗಳನ್ನು ಕಳೆದುಕೊಳ್ಳುವಂತೆ ಮಾಡುತ್ತಿದೆ. ವಲಸಿಗರನ್ನು ಗಡಿಪಾರು ಮಾಡುತ್ತಿದ್ದಾರೆ ಮತ್ತು ಇನ್ನೂ ಪ್ರಯತ್ನಿಸುತ್ತಿದೆ. ಲಿಂಗತ್ವ ಅಲ್ಪ ಸಂಖ್ಯಾತರ ಸಮುದಾಯಕ್ಕೆ ನೀಡುತ್ತಿದ್ದ ರಕ್ಷಣೆಯನ್ನು ಕಡಿಮೆ ಮಾಡುತ್ತಿದೆ. ಆಡಳಿತವನ್ನು ಹಾಳು ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ . .

ಟ್ರಂಪ್ ಅವರ ಆಕ್ರಮಣಕಾರಿ ವ್ಯಾಪಾರ ನೀತಿಗಳನ್ನು ವಿರೋಧಿಸಿ ಯುರೋಪಿನ ಕೆಲವು ರಾಜಧಾನಿಗಳಲ್ಲೂ ಪ್ರತಿಭಟನೆಗಳು ನಡೆದವು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!