Monday, October 3, 2022

Latest Posts

‘ಹರ್ಷಲ್ ಪಟೇಲ್ ಬದಲು ಮೊಹಮ್ಮದ್ ಶಮಿಗೆ ಅವಕಾಶ ನೀಡಬಹುದಿತ್ತು’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಪ್ರಕಟವಾಗಿದೆ. ಇದರಲ್ಲಿ ಬೌಲರ್ ಮೊಹಮ್ಮದ್ ಶಮಿಗೆ ಅವಕಾಶ ನೀಡದಿರುವುದರ ಬಗ್ಗೆ ಚರ್ಚೆ ಆರಂಭವಾಗಿದೆ.
ಈ ಬಗ್ಗೆ ಮಾಜಿ ಕ್ರಿಕೆಟಿಗ, ಆಯ್ಕೆ ಸಮಿತಿ ಮಾಜಿ ಸದಸ್ಯರಾಗಿರುವ ಕೃಷ್ಣಮಾಚಾರಿ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
ಹರ್ಷಲ್ ಪಟೇಲ್ ಬದಲಿಗೆ ಮೊಹಮ್ಮದ್ ಶಮಿಗೆ ಅವಕಾಶ ನೀಡಬಹುದಿತ್ತು. ನಾನು ಸಮಿತಿಯಲ್ಲಿ ಇದ್ದಿದ್ದರೇ ಅದೇ ನಿರ್ಧಾರ ಮಾಡುತ್ತಿದ್ದೆ. ಶಮಿಗೆ ನಿಜವಾದ ಆಕ್ಷನ್, ಬೌನ್ಸ್ ಇದೆ. ಅವರಿಗೆ ಈ ಬಾರಿ ಚಾನ್ಸ್ ಕೊಡಬೇಕಿತ್ತು ಎಂದಿದ್ದಾರೆ. ಹರ್ಷಲ್ ಬೌಲಿಂಗ್ ಬಗ್ಗೆ ಬೇರೆ ಮಾತಿಲ್ಲ. ಅವರು ಉತ್ತಮ ಬೌಲರ್ ಆದರೆ ಶಮಿ ಈ ಪಂದ್ಯಕ್ಕೆ ಸೂಕ್ತವಾಗಿದ್ದರು ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!