ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತಪ್ಪುದಾರಿಗೆಳೆಯುವ ಜಾಹೀರಾತಿಗೆ ಸಂಬಂಧಿಸಿ ಇಂದು ಸುಪ್ರೀಂ ಕೋರ್ಟ್‌ಗೆ ಹಾಜರಾಗಿರುವ ಪತಂಜಲಿ ಆಯುರ್ವೇದದ ಯೋಗ ಗುರು ರಾಮದೇವ್ ಹಾಗೂ ಸಹಾಯಕ ಬಾಲಕೃಷ್ಣ ಅವರನ್ನು ತೀವ್ರವಾಗಿ ತರಾಟೆಗೆತ್ತಿಕೊಂಡ ನ್ಯಾಯಪೀಠ ಕ್ರಮ ಎದುರಿಸಲು ಸಿದ್ಧರಾಗಿರಿ ಎಂದು ಹೇಳಿದೆ.
ತನ್ನ ನಿರ್ದೇಶನ ಪಾಲಿಸಲು ವಿಫಲವಾಗಿರುವ ಕಾರಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ರಾಮದೇವ್ ಹಾಗೂ ಬಾಲಕೃಷ್ಣ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಕಳೆದ ತಿಂಗಳಷ್ಟೇ ಪತಂಜಲಿ ಸಲ್ಲಿಸಿದ ಕ್ಷಮೆಯಾಚನೆ ಸ್ವೀಕರಿಸಲು ನಿರಾಕರಿಸಿದ್ದ ಸುಪ್ರೀಂ ಕೋರ್ಟ್, ನಿಮ್ಮ ಕ್ಷಮೆಯಾಚನೆಯಿಂದ ನಮಗೆ ಸಮಾಧಾನವಿಲ್ಲ ಎಂದು ಹೇಳಿತ್ತು. ಅದಾದ ಬಳಿಕ ರಾಮದೇವ್ ಹಾಗೂ ಬಾಲಕೃಷ್ಣ ವೈಯಕ್ತಿಕವಾಗಿ ಕ್ಷಮೆಯಾಚಿಸಲು ಸಿದ್ಧರಿದ್ದಾರೆ ಎಂದು ಅವರ ವಕೀಲರು ಹೇಳಿದ್ದರು.