April 17, 2026
Friday, April 17, 2026
spot_img

ಪ್ರತಿ ಚುನಾವಣೆಯಲ್ಲೂ ಮಹಿಳೆಯರ ಸಿಟ್ಟು ಎದುರಿಸಲು ಸಿದ್ಧರಾಗಿ: ವಿಪಕ್ಷಗಳ ವಿರುದ್ಧ ಗುಡುಗಿದ ಅಮಿತ್ ಶಾ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಬಹುಮತವನ್ನು ಪಡೆಯುವಲ್ಲಿ ವಿಫಲವಾಗಿದ್ದು, ಈ ಬೆನ್ನಲ್ಲೇ ವಿಪಕ್ಷಗಳ ವಿರುದ್ಧ ಗುಡುಗಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಈ ಸಂಭ್ರಮ, ವಿಜಯೋತ್ಸವ ನಿಜಕ್ಕೂ ಖಂಡನೀಯ ಮತ್ತು ಕಲ್ಪನೆಗೂ ಮೀರಿದ ಕೃತ್ಯ ಎಂದು ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅಮಿತ್ ಶಾ, ಲೋಕಸಭೆಯಲ್ಲಿ ಇಂದು ಬಹಳ ವಿಚಿತ್ರ ದೃಶ್ಯ ಕಂಡಿತು. ಕಾಂಗ್ರೆಸ್, ಟಿಎಂಸಿ, ಡಿಎಂಕೆ ಮತ್ತು ಸಮಾಜವಾದಿ ಪಕ್ಷಗಳು ಸೇರಿಕೊಂಡು ನಾರಿ ಶಕ್ತಿ ಕಾಯ್ದೆಗೆ ಅಗತ್ಯವಾದ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲು ಅವಕಾಶ ನೀಡಲಿಲ್ಲ. ಈ ಮೂಲಕ ಮಹಿಳೆಯರಿಗೆ 33% ಮೀಸಲಾತಿ ನೀಡುವ ಮಸೂದೆಯನ್ನು ತಿರಸ್ಕರಿಸಿ, ಅದರ ಮೇಲೆ ಸಂಭ್ರಮ ಮತ್ತುವಿಜಯೋತ್ಸವ ಕೂಗುವುದು ನಿಜಕ್ಕೂ ಖಂಡನೀಯ ಮತ್ತು ಕಲ್ಪನೆಗೂ ಮೀರಿದ ಸಂಗತಿ ಟೀಕಿಸಿದರು.

ದೇಶದ ಮಹಿಳೆಯರಿಗೆ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಸಿಗಬೇಕಾದ ಮೀಸಲಾತಿ ಹಕ್ಕು ಕೈತಪ್ಪಿ ಹೋಗಿದೆ. ಈ ರೀತಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ನಡೆದುಕೊಂಡಿರುವುದು ಮೊದಲ ಬಾರಿಗೆ ಅಲ್ಲ, ಪದೇ ಪದೇ ಈ ರೀತಿ ಮಾಡಿವೆ. ಅವರ ಈ ಮನಸ್ಥಿತಿ ಮಹಿಳೆಯರ ಹಿತಾಸಕ್ತಿಗಾಗಿ ಅಥವಾ ದೇಶದ ಹಿತಾಸಕ್ತಿಗಾಗಿ ಅಲ್ಲ. ಮಹಿಳೆಯರಿಗೆ ಮಾಡಿದ ಈ ಅವಮಾನ ಇಲ್ಲಿಗೆ ನಿಲ್ಲುವುದಿಲ್ಲ. ವಿರೋಧ ಪಕ್ಷದವರ ವಿರುದ್ಧ ಮಹಿಳೆಯರ ಸಿಟ್ಟು 2029 ರ ಲೋಕಸಭಾ ಚುನಾವಣೆಯಲ್ಲಿ ಮಾತ್ರವಲ್ಲದೆ, ಪ್ರತಿಯೊಂದು ಹಂತದಲ್ಲೂ, ಪ್ರತಿ ಚುನಾವಣೆಯಲ್ಲೂ ಎದುರಿಸಬೇಕಾಗುತ್ತದೆ ಎಂದು ಅಮಿತ್ ಶಾ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !