Friday, September 30, 2022

Latest Posts

ಯುವಕನ ಮೇಲೆ ಕರಡಿ ದಾಳಿ: ಕಣ್ಣಿಗೆ ತೀವ್ರ ಗಾಯ

ಹೊಸದಿಗಂತ ವರದಿ, ಯಲ್ಲಾಪುರ :

ತಾಲೂಕಿನ ಕಣ್ಣಿಗೇರಿ ಪಂಚಾಯತ್ ವ್ಯಾಪ್ತಿಯ ಜನಶೆಟ್ಟಿಕೊಪ್ಪ ದಲ್ಲಿ ಯುವಕನ ಮೇಲೆ ಕರಡಿ ದಾಳಿಯಿಂದಾಗಿ ಯುವಕ ತೀವ್ರ ಸ್ವರೂಪ ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ.

ಗಾಯಾಳು ಸಂತೋಷ್ ಲಾರೆನ್ಸ್ ಸಿದ್ದಿ(32) ಈತ ತಾಲೂಕ ಪಂಚಾಯತಿ ಮಾಜಿ ಅಧ್ಯಕ್ಷ ಲಾರೇನ್ಸ್ ಸಿದ್ದಿ ಪುತ್ರ . ಜನಶೆಟ್ಟಿಕೊಪ್ಪದ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಕರಡಿ ಏಕಾಏಕಿ ದಾಳಿ ಮಾಡಿದೆ.ಕರಡಿ ಯೊಂದಿಗೆ ಸೆಣಸಾಡಿ ಜೀವ ಉಳಿಸಿಕೊಳ್ಳುವಲ್ಲಿ ಯಶಸ್ವಿ ಯಾದರೂ,ಸಂತೋಷ ಸಿದ್ಧಿಯ ತಲೆ ಮುಖ ಹಾಗೂ ಕಣ್ಣಿಗೆ ತೀವ್ರ ಸ್ವರೂಪ ಗಾಯಗಳಾಗಿದ್ದು, ಗಾಯಾಳುವನ್ನು ಯಲ್ಲಾಪುರದ ತಾಲೂಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಎಸ್ ಡಿ ಎಂ ಆಸ್ಪತ್ರೆಗೆ ಸೇರಿಸಲಾಗಿದೆ.

ಘಟನಾ ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಎಲ್.ಎ.ಮಠ, ಅರಣ್ಯಾಧಿಕಾರಿಗಳಾದ ನಾಗರಾಜ ಕಲಗುಟಕರ ಹಾಗೂ ಶ್ರೀನಿವಾಸ ನಾಯ್ಕ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!