ಹುಬ್ಬಳ್ಳಿ ಮೈದಾನದಲ್ಲಿ ತೇವಾಂಶ: ಭಾರತ- ನ್ಯೂಜಿಲ್ಯಾಂಡ್​​ ಎ ತಂಡಗಳ ಟೆಸ್ಟ್ ನಾಳೆಗೆ ಮುಂದೂಡಿಕೆ

ಹೊಸದಿಗಂತ ವರದಿ, ಹುಬ್ಬಳ್ಳಿ:

ಇಲ್ಲಿಯ ರಾಜನಗರದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ(ಕೆಎಸ್‌ಸಿಎ) ಮೈದಾನದಲ್ಲಿ ಗುರುವಾರ ಆಂಭವಾಗಬೇಕಾದ ಭಾರತ ಹಾಗೂ ನ್ಯೂಜಿಲೆಂಡ್ ಎ ತಂಡಗಳ ನಡುವಣ ಎರಡನೇ ಟೆಸ್ಟ್ (೪ದಿನದ) ಪಂದ್ಯ ಕ್ರೀಡಾಂಗಣ ತೇವಾಂಶವಿರುವ ಕಾರಣ ಕೊನೆಗೂ ಆರಂಭವಾಗಲಿಲ್ಲ.
ಬುಧವಾರ ತಡರಾತ್ರಿ ಹಾಗೂ ಗುರುವಾರ ನಸುಕಿನ ಜಾವ ಸುರಿದ ಮಳೆಯಿಂದ ಮೈದಾನ ತೇವವಾಗಿತ್ತು. ಕ್ರೀಡಾಂಗಣದ ಕೆಲ ಸಿಬ್ಬಂದಿ ತೇವಾಂಶ ಹೊರಹಾಕಲು ಸಂಜೆ ವರೆಗೆ ಶ್ರಮ ಪಟ್ಟರು ಪ್ರಯೋಜನವಾಗಲಿಲ್ಲ.
ಟಾಸ್ ಸಹ ಆಗಿಲ್ಲ: ಮೈದಾನದ ಎರಡುಮೂರು ಭಾಗದಲ್ಲಿ ತೇವಾಂಶ ಜಾಸ್ತಿಯಾಗಿತ್ತು. ಕ್ರೀಡಾಂಗಣದ ಸಿಬ್ಬಂದಿ ತೇವಾಂಶ ಕಡಿಮೆಗೊಳಿಸಲು ಹಲವು ಪ್ರಯೋಗ ನಡೆಸಿದರು. ತೇವ ಕಡಿಮೆಯಾದ ಬಳಿಕ ಪಂದ್ಯಆರಂಭಿಸಬಹುದು ಎಂಬ ವಿಶ್ವಾಸದಲ್ಲಿ ಮ್ಯಾಚ್ ರೇಫರಿ ಹಾಗೂ ಅಂಪೇಯರ್ ಇದ್ದರು. ಆದರೆ ತೇವಾಂಶ ಕಡಿಮೆಯಾಗದ ಕಾರಣ ಟಾಸ್ ಸಹ ಮಾಡದೆ ಪಂದ್ಯ ಮುಂದುಡಲಾಯಿತು.
ಅಭಿಮಾನಿಗಳ ದಂಡು: ನಗರದಲ್ಲಿ ಅಪರೂಪಕ್ಕೆ ನಡೆಯುತ್ತಿರುವ ಪಂದ್ಯದ ವೀಕ್ಷಣೆಗೆ ಬೆಳಿಗ್ಗೆ ೯.೩೦ ಕ್ಕೆ ನಗರದ ಹಾಗೂ ಸುತ್ತಮುತ್ತಲಿನ ಜಿಲ್ಲೆಯ ಸಾವಿರಾರೂ ಜನರು ಆಗಮಿಸಿದ್ದರು. ಆಗಾಗ ಮೈದಾನಕ್ಕೆ ಬರುತ್ತಿದ್ದ ಭಾರತ ಹಾಗೂ ನ್ಯೂಜಿಲೆಂಡ್ ಎ ತಂಡಗಳ ಆಟಗಾರರನ್ನು ನೋಡಿ ಸೀಳ್ಳೆ ಹೊಡೆದು ಕೈಬಿಸಿ ಖಷಿಪಟ್ಟರು. ಇನ್ನೂ ಉಭಯ ತಂಡಗಳ ಹಲವಾರು ಆಟಗಾರರ ಆಟೋಗ್ರಾಫ್ ಹಾಗೂ ಸೇಲಿ ಪಡೆಯಲು ಮುಗಿ ಬಿದ್ದರು. ಅಷ್ಟೇ ಅಲ್ಲದೆ ಆಟಗಾರರು ಸೇಲಿ ಹಾಗೂ ಆಟೋಗ್ರಾಫ್ ನೀಡುವ ದೃಶ್ಯ ಕಂಡು ಬಂದವು. ಸಂಜೆ ೪ ಗಂಟೆಯವರೆಗೆ ಜಾತಕಪಕ್ಷಿಯಂತೆ ಕಾಯ್ದ ಅಭಿಮಾನಿಗಳು ನಿರಾಸೆಯಿಂದ ಮನೆಗೆ ತೆರಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!