Thursday, October 6, 2022

Latest Posts

ಈ ಕಾರಣಕ್ಕೆ ಟ್ರಾಲ್‌ ಆಗ್ತಿದೆ ರಾಹುಲ್‌ ಗಾಂಧಿಯವರ ಭಾರತ್‌ ಜೋಡೋ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್‌ ಪಕ್ಷವು ಜನರಿಗೆ ಹತ್ತಿರವಾಗಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್‌ ಜೋಡೋ ಯಾತ್ರೆಯನ್ನು ನಡೆಸುತ್ತಿದೆ. 150 ದಿನಗಳ ಕಾಲ ನಡೆಯಲಿರುವ ಈ ಯಾತ್ರೆಯು 12 ರಾಜ್ಯಗಳ ಮೂಲಕ ಹಾದು ಹೋಗಲಿದೆ. ಯಾತ್ರೆಯ ಕುರಿತಾಗಿ ಪ್ರಾರಂಭದಿಂದಲೂ ರಾಜಕೀಯ ತಿಕ್ಕಾಟಗಳು ನಡೆಯುತ್ತಲೇ ಇವೆ. ಬಿಜೆಪಿ ಮತ್ತು ಕಾಂಗ್ರೆಸ್‌ ವಿರೋಧಿಗಳು ಯಾತ್ರೆಯ ಕುರಿತಾಗಿ ಬೇರೆ ಬೇರೆ ರೀತಿಯಲ್ಲಿ ಹಣಿಯುತ್ತಿವೆ. ಪರಸ್ಪರ ಆರೋಪ ಪ್ರತ್ಯಾರೋಪ ಮಾಡಲಾಗುತ್ತಿದೆ.

ಆದರೆ ಇವೆಲ್ಲವುಗಳ ನಡುವೆ ರಾಹುಲ್‌ ಗಾಂಧಿಯವರು ಹಾಗೆಯೇ ಭಾರತ್‌ ಜೋಡೋ ದಲ್ಲಿ ಭಾಗವಹಿಸಿರುವ ಕನಯ್ಯ ಕುಮಾರ್‌ ಅವರು ಸಾಮಾಜಿಕವಾಗಿ ಟ್ರಾಲ್‌ ಆಗುತ್ತಿದ್ದಾರೆ.

ಮೊದಲನೇಯದಾಗಿ ರಾಹುಲ್‌ ಗಾಂಧಿಯವರ ಭಾರತ್‌ ಜೋಡೋ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ರೀತಿಯಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಅವರು ಯಾತ್ರೆಯ ವೇಲೆ ಹಾಕಿಕೊಂಡಿದ್ದಾರೆ ಎನ್ನಲಾದ ಟೀ-ಶರ್ಟ್‌ ಒಂದು ಈ ಟೀಕೆಗಳ ಮೂಲಬಿಂದು. ಬಡತನ, ನಿರೋದ್ಯೋಗಳ ಬಗ್ಗೆ ಮಾತನಾಡುವ ರಾಹುಲ್‌ ಗಾಂಧಿ ಅತ್ಯಂತ ದುಬಾರಿಯ ಬಟ್ಟೆ ಹಾಕಿಕೊಂಡಿರುವುದು ಈಗ ಬಯಲಾಗಿದೆ.

ಬರ್‌ ಬೆರ್ರಿ ಎಂಬ ಬ್ರಾಂಡ್‌ ಗೆ ಸೇರಿ ಶರ್ಟ್‌ ಒಂದನ್ನು ರಾಗಾ ಹಾಕಿಕೊಂಡಿದ್ದು ಈ ಶರ್ಟಿನ ಮೂಲ ಬೆಲೆ 41 ಸಾವಿರಗಳಷ್ಟಿದೆ. ಅಷ್ಟು ದುಬಾರಿ ಮೌಲ್ಯದ ಬಟ್ಟೆ ಹಾಕಿಕೊಳ್ಳುವ ರಾಹುಲ್‌ ಅವರು ಭಾರತ್‌ ಜೋಡೋದಲ್ಲಿ ಬಡತನ ಇತ್ಯಾದಿಗಳ ಬಗ್ಗೆ ಮಾತನಾಡುತ್ತಾರೆ ಎಂಬೆಲ್ಲ ಟೀಕೆಗಳು ವ್ಯಕ್ತವಾಗುತ್ತಿವೆ.

ಇನ್ನು ಒಂದು ಕಾಲದಲ್ಲಿ ತುಕ್ಡೇ ಗ್ಯಾಂಗ್‌ ಅಂತಲೇ ಪ್ರಖ್ಯಾತವಾಗಿದ್ದ ಕನ್ನಯ್ಯಕುಮಾರ್‌ ಇದೀಗ ಭಾರತ್‌ ಜೋಡೋದಲ್ಲಿ ಭಾಗವಹಿಸುತ್ತಿರುವುದರ ಕುರಿತು ಹಲವರು ಸಾಮಾಜಿಕ ಮಾಧ್ಯಮದಲ್ಲಿ ಟ್ವೀಟ್‌ ಮಾಡಿದ್ದಾರೆ. ಭಾರತವನ್ನು ತುಂಡರಿಸುವ ಮಾತನಾಡಿದ್ದವನೊಬ್ಬ ಈಗ ಭಾರತವನ್ನು ಜೋಡಿಸುವ ಕುರಿತು ಮಾತನಾಡುತ್ತಿರುವುದು ಹಲವರ ಆಶ್ಚರ್ಯಕ್ಕ ಕಾರಣವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!