MATURITY | ಪ್ರಬುದ್ಧರಾಗೋದು ಸುಲಭದ ಮಾತಲ್ಲ, ಈ ಆರು ಮಾರ್ಗಗಳ ಸಹಾಯ ಪಡೆಯಿರಿ..

ಸಣ್ಣ ಪುಟ್ಟ ಜಗಳಕ್ಕೂ ಮೂತಿ ಊದುಸ್ಕೊಂಡು ಕೂರ‍್ತ್ಯ, ಚೈಲ್ಡ್ ಥರ ಆಡ್ತ್ಯ, ವಯಸ್ಸಾಗಿದೆ ಅಷ್ಟೆ ಮೆಚ್ಯೂರಿಟಿ ಇಲ್ಲ, ಅದ್ಯಾವಾಗ ಮೆಚುರಿಟಿ ಬರತ್ತೋ ಭಗವಂತನಿಗೇ ಗೊತ್ತು…

ನೀವು ಜೀವನದ ಒಂದಲ್ಲಾ ಒಂದು ಸ್ಟೇಜ್‌ನಲ್ಲಿ ಈ ರೀತಿ ಯಾರಿಂದಲಾದರೂ ಬೈಸ್ಕೊಂಡಿಲ್ವಾ? ಮೆಚ್ಯೂರ್ ಆಗಿ ಬಿಹೇವ್ ಮಾಡೋದು ಅಂದ್ರೇನು? ಯಾವಾಗ್ಲೂ ಗಂಭೀರವಾಗಿ ಕೂತಿರಬೇಕಾ? ಈ ರೀತಿ ಅನುಮಾನ ಕಾಡಿದ್ರೆ ಈ ಆರು ಮಾರ್ಗಗಳನ್ನು ಅನುಸರಿಸಿ ನೋಡಿ..

  1. ರಿಯಾಲಿಟಿ ಒಪ್ಪಿಕೊಳ್ಳಿ, ಕೆಲಸದಿಂದ ನಿಮ್ಮನ್ನು ತೆಗೆದಿದ್ದಾರೆ, ಹೌದು, ಸರಿ ಅಲ್ಲೇ ಸುತ್ತುವ ಬದಲು, ಒಂದೆರಡು ದಿನ ಬ್ರೇಕ್ ಪಡೆದು ಬೇರೆ ಕೆಲಸ ಹುಡುಕಬೋದಲ್ವಾ? ರಿಯಾಲಿಟಿ ಮೊದಲು ಒಪ್ಪಿಕೊಳ್ಳಿ, ವಾಸ್ತವವೇ ಸತ್ಯ.
  2. ನಿಮ್ಮ ಭಾವನೆಗಳನ್ನು ಕಂಟ್ರೋಲ್ ಮಾಡೋದನ್ನು ಕಲಿತುಕೊಳ್ಳಿ. ಸಿಟ್ಟು ಬಂದಾಗ ಅತಿಯಾಗಿ ಮಾತನಾಡೋದು, ನೋವಾದಾಗ ಅತ್ತು ರಂಪ ಮಾಡೋದು, ಖುಷಿಯಾದಾಗ ಅಕ್ಕಪಕ್ಕದವರಿಗೆ ನೋವಾಗಿದೆ ಎನ್ನೋದನ್ನು ಮರೆತು ಕುಣಿಯೋದು. ಎಲ್ಲ ಭಾವನೆಗಳನ್ನು ತೋರಿಸಬೇಕು, ಸಂದರ್ಭಕ್ಕೆ ತಕ್ಕಂತೆ ಭಾವನೆಗಳನ್ನು ಹಿಡಿದಿಟ್ಟುಕೊಳ್ಳಿ.
  3. ಮಾನಸಿಕ ಆರೋಗ್ಯ, ದೈಹಿಕ ಆರೋಗ್ಯದಷ್ಟೇ ಮುಖ್ಯ. ಕೈ ನೋವು ಎಂದು ಆಸ್ಪತ್ರೆಗೆ ಹೋಗೋ ನೀವು ಮನಸ್ಸಿಗೆ ಆದ ನೋವಿಗೆ ಏನ್ ಮಾಡ್ತೀರಿ? ಮನಸ್ಸಿನಲ್ಲಿಯೇ ಇಟ್ಟುಕೊಂಡು ಕೊರಗುತ್ತೀರಿ. ಹೀಗೆ ನಿಮ್ಮ ಮಾನಸಿಕ ಆರೋಗ್ಯದ ಕಡೆ ಗಮನಕೊಡಿ.
  4. ಯಾರನ್ನೂ ಜಡ್ಜ್ ಮಾಡಬೇಡಿ. ನಿಮ್ಮ ಕಣ್ಣೆದುರೇ ಅವರು ಏನೋ ಮಾಡಿರಬಹುದು, ಆದರೆ ಒಂದು ನಿಮಿಷದ ಘಟನೆಯಿಂದ ಜನರನ್ನು ಅಳೆಯಬೇಡಿ. ಯಾರ ಜೀವನ ಎಷ್ಟು ಕಷ್ಟವಾಗಿದ್ಯೋ ಯಾರಿಗೆ ಗೊತ್ತು?
  5. ಯಾವುದೋ ಜಗಳ, ಗಲಾಟೆ ಆಗ್ತಿದ್ರೆ ಅದರಿಂದ ದೂರ ಇರಿ. ಅಥವಾ ನಿಮ್ಮ ಮನೆಯಲ್ಲೇ ಗಲಾಟೆ ಆಗ್ತಿದ್ರೆ ಸುಮ್ಮನೆ ನಿಂತುಬಿಡಿ. ಮಾತು ಆಡಿದರೆ ಸಂಬಂಧವೇ ಒಡೆದುಹೋಗಬಹುದು.
  6. ನಿಮ್ಮ ಖುಷಿಗೆ ಬೇರೆಯವರ ಹೆಸರ‍್ಯಾಕೆ? ನಿಮ್ಮ ಸಂತೋಷಕ್ಕೆ ಬೇರೆಯವರನ್ನು ಹೊಣೆ ಮಾಡಬೇಡಿ. ನೀವು ಖುಷಿಯಾಗಿದ್ರೆ ಸಾಕು, ನಿಮ್ಮಲ್ಲೇ ಖುಷಿಯನ್ನು ಕಂಡುಕೊಳ್ಳಿ ಜಗತ್ತೇ ಖುಷಿಯಾಗಿ ಇರುತ್ತದೆ.
- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!