May 16, 2026
Saturday, May 16, 2026
spot_img

ಬೆಡ್‌ಟೈಮ್ ವಾಟರ್ ಹ್ಯಾಬಿಟ್: ರಾತ್ರಿ ನೀರು ಕುಡಿಯುವುದು ಅಮೃತವೋ, ವಿಷವೋ?

ಆರೋಗ್ಯವಾಗಿರಲು ದಿನಕ್ಕೆ 8 ರಿಂದ 10 ಲೋಟ ನೀರು ಕುಡಿಯಬೇಕು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ, ರಾತ್ರಿ ಮಲಗುವ ಮುನ್ನ ನೀರು ಕುಡಿಯಬೇಕೇ ಅಥವಾ ಬೇಡವೇ? ಕುಡಿಯುವುದಾದರೆ ಎಷ್ಟು ಪ್ರಮಾಣದಲ್ಲಿ ಕುಡಿಯಬೇಕು? ಎಂಬ ಗೊಂದಲ ಹಲವರಲ್ಲಿದೆ. ದೇಹದ ಹೈಡ್ರೇಶನ್ ಕಾಪಾಡಿಕೊಳ್ಳಲು ನೀರು ಮುಖ್ಯವಾದರೂ, ತಪ್ಪು ಸಮಯದಲ್ಲಿ ಮತ್ತು ತಪ್ಪು ಪ್ರಮಾಣದಲ್ಲಿ ಕುಡಿಯುವುದು ನಿಮ್ಮ ನಿದ್ದೆಯನ್ನೇ ಕೆಡಿಸಬಹುದು.

ಆರೋಗ್ಯ ತಜ್ಞರ ಪ್ರಕಾರ, ರಾತ್ರಿ ಮಲಗುವ ಮುನ್ನ ಅರ್ಧ ಗ್ಲಾಸ್‌ನಿಂದ ಒಂದು ಸಣ್ಣ ಗ್ಲಾಸ್ (ಸುಮಾರು 100 ರಿಂದ 200 ಮಿ.ಲೀ.) ನೀರು ಕುಡಿಯುವುದು ಸೂಕ್ತ. ಅತಿಯಾಗಿ ನೀರು ಕುಡಿದು ಮಲಗುವುದರಿಂದ ಆರೋಗ್ಯದ ಮೇಲೆ ಲಾಭಕ್ಕಿಂತ ನಷ್ಟವೇ ಹೆಚ್ಚು.

ನೀವು ಮಲಗುವ ಕನಿಷ್ಠ 1 ರಿಂದ 2 ಗಂಟೆಗಳ ಮುಂಚಿತವಾಗಿ ನೀರು ಕುಡಿಯುವುದನ್ನು ನಿಲ್ಲಿಸಬೇಕು. ಮಲಗುವ ಮುನ್ನ ಕೇವಲ ಒಂದು ಸಣ್ಣ ಸಿಪ್ ನೀರನ್ನು ಮಾತ್ರ ಕುಡಿಯುವುದು ಉತ್ತಮ ಅಭ್ಯಾಸ.

ನಿಯಮಿತ ಪ್ರಮಾಣದಲ್ಲಿ ನೀರು ಕುಡಿದು ಮಲಗುವುದರಿಂದ ಕೆಲವು ಆರೋಗ್ಯಕರ ಲಾಭಗಳಿವೆ:

ರಾತ್ರಿ ನಿದ್ದೆ ಮಾಡುವಾಗ ದೇಹದ ತಾಪಮಾನ ಸಮತೋಲನದಲ್ಲಿರಲು ಇದು ಸಹಾಯ ಮಾಡುತ್ತದೆ.

ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕಲು ಮತ್ತು ಜೀರ್ಣಕ್ರಿಯೆ ಸುಲಭವಾಗಲು ಹದ ಬಿಸಿ ನೀರು ನೆರವಾಗುತ್ತದೆ.

ರಾತ್ರಿ ದೇಹದಲ್ಲಿ ನೀರಿನ ಕೊರತೆಯಾದರೆ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಇರುತ್ತದೆ. ಸ್ವಲ್ಪ ನೀರು ಕುಡಿಯುವುದರಿಂದ ರಕ್ತಸಂಚಾರ ಸರಾಗವಾಗಿ ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ ಎಂದು ಕೆಲವು ಸಂಶೋಧನೆಗಳು ಹೇಳುತ್ತವೆ.

ನಿದ್ದೆ ಸರಿಯಾಗಿ ಆಗದಿದ್ದರೆ ಮರುದಿನ ಬೆಳಗ್ಗೆ ತಲೆನೋವು, ಆಲಸ್ಯ, ಮೂಡ್ ಸ್ವಿಂಗ್ಸ್ ಮತ್ತು ಆಯಾಸ ಕಾಣಿಸಿಕೊಳ್ಳುತ್ತದೆ.

ದೀರ್ಘಕಾಲದವರೆಗೆ ನಿದ್ದೆಗೆಡುವುದರಿಂದ ರಕ್ತದೊತ್ತಡ ಮತ್ತು ಹೃದಯದ ಕಾಯಿಲೆಗಳ ಅಪಾಯ ಹೆಚ್ಚಾಗಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !