ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆ ಜೀವನದ ಪ್ರಮುಖ ಘಟ್ಟ ಹೌದು, ಆದರೆ ಮದುವೆಯಾಗದೇ ಹೋದರೆ ಬದುಕೋಕೆ ಸಾಧ್ಯವಿಲ್ಲವಾ? ಇಲ್ಲೊಬ್ಬ ಯುವಕ ಮದುವೆಯಾಗಲು ಕನ್ಯೆ ಸಿಗುತ್ತಿಲ್ಲ ಎಂದು ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಮದುವೆಗೆ ಹುಡುಗಿ ಸಿಗದಿದ್ದರಿಂದ ನೊಂದಿದ್ದ ಯುವಕನೋರ್ವ ಹೈಟೆನ್ಷನ್ ಕಂಬ ಏರಿದ್ದಾನೆ. ತಾಯಿ ಸೇರಿದಂತೆ ಗ್ರಾಮಸ್ಥರು ಯುವಕನಿಗೆ ಇಳಿಯುವಂತೆ ಸೂಚಿಸಿದ್ದಾರೆ. ದುರಂತ ಎಂದರೆ ಆತ ಇಳಿಯುವಾಗ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದಾನೆ.
ಕೊಳ್ಳೇಗಾಲ ತಾಲೂಕಿನ ಟಿ.ಸಿ.ಹುಂಡಿ ಬಳಿ ಕುಡಿದ ಮತ್ತಿನಲ್ಲಿ ಯುವಕ ಮಸಣಶೆಟ್ಟಿ ವಿದ್ಯುತ್ ಕಂಬ ಏರಿದ್ದನು. ಆದರೆ ಇಳಿಯುವಾಗ ವೈರ್ ತಗುಲಿ ಮಸಣಶೆಟ್ಟಿ ಮೃತಪಟ್ಟಿದ್ದಾನೆ. ಮದುವೆಯಾಗಲು ಹೆಣ್ಣು ಸಿಕ್ಕಿಲ್ಲವೆಂದು ಮಸಣಶೆಟ್ಟಿ ಕುಡಿತ ಶುರು ಮಾಡಿದ್ದನು.
ಮಸಣಶೆಟ್ಟಿ ಎರಡು ಬಾರಿ ನೋಡಿ ಬಂದ ಹೆಣ್ಣಿನ ಕಡೆಯವರು ಆತನ ಮನೆ ಚಿಕ್ಕದು ಹಾಗೂ ಆಸ್ತಿ-ಪಾಸ್ತಿ ಏನು ಇಲ್ಲ ಎಂದು ತಿರಸ್ಕರಿಸಿದ್ದರು. ಇದರಿಂದ ಮಾನಸಿಕ ಖಿನ್ನತೆಗೆ ಒಳಾಗಿದ್ದ ಮಸಣಶೆಟ್ಟಿ ಕುಡಿತದ ದಾಸನಾಗಿದ್ದ. ಇಂದು ತಾಯಿ ಕಣ್ಣೇದುರೇ ಆತ ಮೃತಪಟ್ಟಿದ್ದಾನೆ.