Tuesday, February 27, 2024

HEALTH | ಪ್ರತಿನಿತ್ಯ ಖಾಲಿ ಹೊಟ್ಟೆಗೆ ಬೀಟ್ರೂಟ್ ಜ್ಯೂಸ್, ಆರೋಗ್ಯಕ್ಕೆ ಭಾರೀ ಲಾಭ

ಇಂದಿನ ಲೈಫ್ ಸ್ಟೈಲ್‌ನಿಂದಾಗಿ ಆರೋಗ್ಯದ ಮೇಲೂ ಸಾಕಷ್ಟು ತೊಂದರೆಗಳಾಗುತ್ತವೆ. ಜಂಜಾಟ, ಒದ್ದಾಟದ ಜೀವನದಲ್ಲಿ ಆರೋಗ್ಯ ಸಂಪೂರ್ಣ ಹದಗೆಡುತ್ತಿರುತ್ತವೆ. ಇಂತಹ ಸಂದರ್ಭದಲ್ಲಿ ಪ್ರತಿನಿತ್ಯ ಈ ಜ್ಯೂಸ್ ಸೇವಿಸಿದ್ದೇ ಆದಲ್ಲಿ ನಿಮ್ಮ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಗಳಾಗುವುದರ ಜೊತೆಗೆ ಸಂಭಾವ್ಯ ತೊಂದರೆಗಳಿಂದ ದೂರವಿದ್ದು ಆರೋಗ್ಯಕರ ಜೀವನ ನಡೆಸಬಹುದಾಗಿದೆ. ಹಾಗಾದರೆ ನಮ್ಮ ಯಾವ ಅಭ್ಯಾಸವನ್ನು ರೂಢಿಸಬೇಕು ಎಂಬುದನ್ನು ತಿಳಿಯೋಣ ಬನ್ನಿ.

ಕೆಂಬಣ್ಣದ ಗಡ್ಡೆ ಈ ಬೀಟ್ರೂಟ್. ಒಂದು ವಿಭಿನ್ನ ರುಚಿಯ ಈ ಬೀಟ್ರೂಟ್ ಹಸಿಯಾಗಿಯೂ, ಆಹಾರವಾಗಿಯೂ ಬಳಸಲ್ಪಡುತ್ತದೆ. ಇದರ ಜ್ಯೂಸ್ ಅತ್ಯಂತ ರುಚಿಕರ. ಬೀಟ್ ರೂಟ್ ಜ್ಯೂಸ್ ಸೇವಿಸುವುದರಿಂದ ಅನೇಕ ಲಾಭಗಳಿವೆ.

ಬೀಟ್ರೂಟ್ ಜ್ಯೂಸ್ ದೇಹಕ್ಕೆ ಪೌಷ್ಟಿಕಾಂಶವನ್ನು ಒದಗಿಸುತ್ತದೆ, ಶಕ್ತಿಯನ್ನು ಹೆಚ್ಚಿಸುತ್ತದೆ, ಉರಿಯೂತವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ರಕ್ತದ ಕೊರತೆ, ಹೃದ್ರೋಗ ಮತ್ತು ಕ್ಯಾನ್ಸರ್ ತಡೆಗಟ್ಟಲು ಕೂಡ ಸಹಕಾರಿ ಆಗಿದೆ ಎಂದು ಅನೇಕ ಸಂಶೋಧನೆಗಳು ಸಾಬೀತು ಪಡಿಸಿವೆ. ಎಲ್ಲಾ ಹವಾಮಾನದಲ್ಲೂ ಈ ಬೀಟ್ ರೂಟ್ ಸೇವಿಸಬಹುದು. ಬೆಳಗ್ಗಿನ ಹೊತ್ತಲ್ಲಿ ಇದರ ಜ್ಯೂಸ್ ಕುಡಿದದ್ದೇ ಆದರೆ ಆರೋಗ್ಯ ವೃದ್ಧಿ ಗ್ಯಾರಂಟಿ.

ಬೀಟ್ರೂಟ್ನಲ್ಲಿ ವಿಟಮಿನ್ ಬಿ 6, ವಿಟಮಿನ್ ಸಿ, ಕ್ಯಾಲ್ಸಿಯಂ, ಕಬ್ಬಿಣ, ಫೈಬರ್, ಮ್ಯಾಂಗನೀಸ್, ಪೊಟ್ಯಾಸಿಯಮ್ ಸೇರಿದಂತೆ ಕೆಲ ಅಗತ್ಯ ಪೋಷಕಾಂಶಗಳು ಹೇರಳವಾಗಿದೆ. ಬೀಟ್ರೂಟ್ ದೇಹವನ್ನು ಆರೋಗ್ಯಕರವಾಗಿರಿಸುತ್ತದೆ. ಹಾಗೂ ದೇಹಕ್ಕೆ ಬೇಕಾದ ಎಲ್ಲಾ ಪೋಷಕಾಂಶಗಳನ್ನು ನೀಡುವಲ್ಲಿ ಸಹಾಯ ಮಾಡುತ್ತದೆ. ಉತ್ತಮವಾದ ಫೈಬರ್ ಕೂಡಾ ಬೀಟ್ರೂಟಿನಲ್ಲಿದೆ. ಮಲಬದ್ಧತೆ ನಿವಾರಿಸಲು ಇದು ಸಹಕಾರಿಯಾಗುತ್ತದೆ. ಹೊಟ್ಟೆಯ ಅನೇಕ ಸಮಸ್ಯೆಗಳನ್ನು ದೂರ ಮಾಡುತ್ತದೆ.

ಸಂಧಿವಾತದಂತಹ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ಇನ್ನೊಂದು ಪ್ರಮುಖವಾದ ಅಂಶವೆಂದರೆ ಬೀಟ್ರೂಟ್ ತಿನ್ನುವುದು ಕೆಲವು ರೀತಿಯ ಕ್ಯಾನ್ಸರ್ ತಡೆಗಟ್ಟಬಹುದು. ಏಕೆಂದರೆ ಬೀಟ್ರೂಟ್ನಲ್ಲಿರುವ ವರ್ಣದ್ರವ್ಯವು ದೇಹದಲ್ಲಿ ಕ್ಯಾನ್ಸರ್ ಉಂಟುಮಾಡುವ ಜೀವಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ ಎಂದು ಸಂಶೋಧನೆಗಳು ಸಾಬೀತು ಪಡಿಸಿವೆ. ಹೃದ್ರೋಗದ ಅಪಾಯವನ್ನು ಕೂಡಾ ಬೀಟ್ರೋಟ್ ಕಡಿಮೆ ಮಾಡುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಈ ಎಲ್ಲಾ ಲಾಭಗಳು ಬೀಟ್ರೋಟ್ ಸೇವನೆಯಿಂದ ಲಭ್ಯವಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!