ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಮರಾಜನಗರದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಅಪಾರ ಪ್ರಮಾಣದ ನಷ್ಟವಾಗಿದೆ.
ಗ್ಯಾಸ್ ಸೋರಿಕೆಯಿಂದಾಗಿ ಲಾಡು ತಯಾರಿಕಾ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 36 ಸಾವಿರ ಲಡ್ಡುಗಳು ಬೆಂಕಿಗೆ ಆಹುತಿಯಾಗಿವೆ. ಅಷ್ಟೇ ಅಲ್ಲದೆ ಒಂಬತ್ತು ಕ್ವಿಂಟಾಲ್ ಸಕ್ಕರೆ, 96 ಕೆಜಿ ಕಡ್ಲೆಹಿಟ್ಟು, 40 ಕೆಜಿ ನಂದಿನಿ ತುಪ್ಪ, 30 ಕೆಜಿ ಒಣದ್ರಾಕ್ಷಿ, 20 ಕೆಜಿ ಗೋಡಂಬಿ ನಾಶವಾಗಿದೆ. ಇದರ ಒಟ್ಟಾರೆ ಮೊತ್ತ 10 ಲಕ್ಷ ರೂಪಾಯಿಗಳಾಗಿದೆ.
ಅವನ್‌ಗೆ ಸಂಪರ್ಕ ಕಲ್ಪಿಸಿದ್ದ ಸಿಲಿಂಡರ್ ಖಾಲಿಯಾಗಿದ್ದು, ಅದನ್ನು ಬದಲಾವಣೆ ಮಾಡುವ ವೇಳೆ ಘಟನೆ ನಡೆದಿದೆ. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ.