ಹೀಗೆ ಮಾಡಿ ಬೀಟ್‌ರೂಟ್‌ ಅಕ್ಕಿ ಉಂಡೆ…

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೇಕಾಗುವ ಪದಾರ್ಥಗಳು:

ಬೀಟ್‌ರೂಟ್- ಅರ್ಧ ಭಾಗ ಕತ್ತರಿಸಿದ್ದು
ಅಕ್ಕಿಹಿಟ್ಟು-ಕಾಲು ಕಪ್‌
ಉಪ್ಪು-ರುಚಿಗೆ ತಕ್ಕಷ್ಟು
ಬೆಲ್ಲ, ತೆಂಗಿನಕಾಯಿ
ಒಗ್ಗರಣೆ ಪದಾರ್ಥಗಳು

ಮಾಡುವ ವಿಧಾನ: 

ಮೊದಲಿಗೆ ಸಿಪ್ಪೆ ತೆಗೆದು ಕತ್ತರಿಸಿದ ಬೀಟ್‌ರೂಟನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪೇಸ್ಟ್‌ ಮಾಡಿಕೊಳ್ಳಿ, ಅದನ್ನು ಒಂದು ಬಾಣಲೆಗೆ ಹಾಕಿ ಸ್ವಲ್ಪ ಉಪ್ಪು ಸೇರಿಸಿ ಕುದಿ ಬರುವರೆಗೆ ಕುದಿಸಿ. ನಂತರ ಅಕ್ಕಿಹಿಟ್ಟು ಸೇರಿಸಿ ಚೆನ್ನಾಗಿ ಕಲಸಿ. ಉಂಡೆ ಬರುವ ಹದಕ್ಕೆ ಮಿಶ್ರಣವಾಗಬೇಕು. ತಣಿದ ಮೇಲೆ ಸಣ್ಣ ಸಣ್ಣ ಉಂಡೆಗಲಾಗಿ ಮಾಡಿ. ಅದನ್ನು ಇಡ್ಲಿ ಪಾತ್ರೆಯಲ್ಲಿಟ್ಟು ಹಬೆಯಲ್ಲಿ ಬೇಯಿಸಿ. ಮತ್ತೊಂದು ಬೌಲ್‌ನಲ್ಲಿ ಪುಡಿ ಮಾಡಿದ ಬೆಲ್ಲ, ತೆಂಗಿನಕಾಯಿ ಮಿಕ್ಸ್‌ ಮಾಡಿ ಬೆಂದ ಉಂಡೆಗಳನ್ನು ಸೇರಿಸಿದರೆ ಸಿಹಿ ಬೀಟ್‌ರೂಟ್‌ ಅಕ್ಕಿ ಉಂಡೆ ರೆಡಿ. ಉಳಿದವುಗಳಿಗೆ ಎಣ್ಣೆ, ಕರಿಬೇವು, ಸಾಸಿವೆ, ಮೆಣಸಿನಕಾಯಿ, ಅರಶಿಣ, ಈರುಳ್ಳಿ ಹಾಕಿ ಬೇಯಿಸಿ ಉಂಡೆಗಳನ್ನು ಹಾಕಿ ಮಗುಚಿ, ಕೊನೆಯಲ್ಲಿ ತೆಂಗಿನಕಾಯಿ ಹಾಕಿದರೆ ಖಾರದ ಉಂಡೆ ಸವಿಯಲು ಸಿದ್ಧ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!