ಬೀಜಿಂಗ್ ವಿಂಟರ್ ಒಲಿಂಪಿಕ್ಸ್ 2022 : ಟಿಕೆಟ್ ಮಾರಾಟ ನಿಷೇಧ, ವೀಕ್ಷಕರಿಗಿಲ್ಲ ಅವಕಾಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೀನಾದ ಬೀಜಿಂಗ್‌ನಲ್ಲಿ ಮುಂದಿನ ತಿಂಗಳು ನಡೆಯುವ ಒಲಿಂಪಿಕ್ಸ್‌ಗೆ ವೀಕ್ಷಕರಿಗೆ ಅವಕಾಶ ಇಲ್ಲ.
ಕೋವಿಡ್ ಸೋಂಕು ಹೆಚ್ಚಳ ಹಿನ್ನೆಲೆ ಸಾರ್ವಜನಿಕವಾಗಿ ಟಿಕೆಟ್ ಮಾರಾಟವನ್ನು ನಿಷೇಧಿಸಲಾಗಿದೆ. ಇನ್ನು ಈಗಾಗಲೇ ಆನ್‌ಲೈನ್ ಮೂಲಕ ಟಿಕೆಟ್ ಪಡೆದಿರುವ ದೇಶೀಯ ವೀಕ್ಷಕರು ಕಠಿಣ ಕೋವಿಡ್ ನಿಯಮ ಪಾಲಿಸಬೇಕಿದೆ.
ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಸಿಬ್ಬಂದಿ, ಆಟಗಾರರಿಗೆ ಸೋಂಕು ತಗುಲಬಾರದು ಎಂದು ಈ ನಿರ್ಧಾರಕ್ಕೆ ಬರಲಾಗಿದೆ. ಕ್ರೀಡಾಪಟುಗಳು ಹಾಗೂ ಸಿಬ್ಬಂದಿ ವರ್ಗದವರನ್ನು ಪ್ರತ್ಯೇಕಿಸಲಾಗಿದೆ.
ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳು ಈಗಾಗಲೇ ಬೀಜಿಂಗ್ ತಲುಪಿದ್ದಾರೆ, ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ನಡೆಯುತ್ತಿದೆ. ಬೀಜಿಂಗ್‌ನಲ್ಲಿ ಮನೆಯಿಂದ ಹೊರಬರಲು ಕೋವಿಡ್ ನೆಗೆಟಿವ್ ವರದಿ ಕಡ್ಡಾಯಾವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!