ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ: 4 ಮಕ್ಕಳು ಸೇರಿ 26 ಮಂದಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 5.6 ತೀವ್ರತೆ ದಾಖಲಾಗಿದೆ. ಇದರ ಪರಿಣಾಮ 26 ಮಂದಿ ಬಲಿಯಾಗಿದ್ದಾರೆ.
ಈಗಾಗಲೇ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಕ್ರೌರ್ಯಕ್ಕೆ ತತ್ತರಿಸಿರುವ ಜನರಿಗೆ ಈಗ ಪ್ರಕೃತಿ ಕೂಡ ಬೇಸರ ವ್ಯಕ್ತಪಡಿಸಿದೆ. ಸೋಮವಾರ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭಾರೀ ಭೂಕಂಪನಕ್ಕೆ ಮನೆಗಳ ಮೇಲ್ಛಾವಣಿ ಕುಸಿದಿದ್ದು, 26 ಜನ ಮೃತಪಟ್ಟಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ  ಜಿಲ್ಲಾ ಗವರ್ನರ್ ಮೊಹಮ್ಮದ್ ಸಲೇಹ್ ಪುರ್​ಡೆಲ್‌, ಬಾದ್ಘಿಸ್‌ನ ಪಶ್ಚಿಮ ಪ್ರಾಂತ್ಯದ ಖಾದಿಸ್ ಜಿಲ್ಲೆಯಲ್ಲಿ ಈ ಭೂಕಂಪನ ಸಂಭವಿಸಿದೆ. ಇದರಿಂದ ಮೃತಪಟ್ಟ 26 ಜನರಲ್ಲಿ 5 ಮಹಿಳೆಯರು 4 ಮಕ್ಕಳು ಸೇರಿದ್ದಾರೆ. ಇನ್ನೂ ಹಲವರು ಗಾಯಗೊಂಡಿದ್ದಾರೆ ಎಂದರು.
2015 ರಲ್ಲಿ ದಕ್ಷಿಣ ಏಷ್ಯಾದಾದ್ಯಂತ ಪರ್ವತ ಶ್ರೇಣಿಯಲ್ಲಿ ಕೇಂದ್ರೀಕೃತವಾದ 7.5 ತೀವ್ರತೆಯ ಪ್ರಬಲ ಭೂಕಂಪನದಿಂದ 280ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!