JOB | ಭಾರತ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್‌ನಲ್ಲಿ 428 ಇಂಜಿನಿಯರ್ ಹುದ್ದೆಗಳ‌ ನೇಮಕಾತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್‌ 428 ಪ್ರಾಜೆಕ್ಟ್‌ ಇಂಜಿನಿಯರ್-I ಮತ್ತು ಟ್ರೈನಿ ಇಂಜಿನಿಯರ್ I‌ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಬಿ.ಎಸ್ಸಿ, ಬಿ.ಇ/ಬಿ.ಟೆಕ್‌ ವಿದ್ಯಾರ್ಹತೆ ಜೊತೆಗೆ ಗರಿಷ್ಟ 32 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಇಂಜಿನಿಯರ್‌ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 30,000/- ರಿಂದ 55,000/-ರೂಗಳ ವರೆಗೆ ವೇತನವನ್ನು ನೀಡಲಾಗುವುದು.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಮೇ 18,2023ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!