Wednesday, June 7, 2023

Latest Posts

ದುಡ್ಡು ಕದ್ದಿದ್ದಾರೆ, ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯರ ವಿವಸ್ತ್ರಗೊಳಿಸಿದ ವಾರ್ಡನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾಸ್ಟೆಲ್‌ಗಳಲ್ಲಿ ವಾರ್ಡನ್ ಹೇಳಿದ್ದೇ ರೂಲ್ಸ್ ಅನ್ನೋ ಮಾತಿದೆ, ಅದೇ ರೀತಿ ದೆಹಲಿಯ ಹಾಸ್ಟೆಲ್ ಒಂದರಲ್ಲಿ ವಾರ್ಡನ್ ದುಡ್ಡು ಕದ್ದ ಅನುಮಾನದ ಮೇಲೆ ಇಬ್ಬರು ವಿದ್ಯಾರ್ಥಿನಿಯರನ್ನು ವಿವಸ್ತ್ರಗೊಳಿಸಿ ಅವಮಾನ ಮಾಡಿದ್ದಾರೆ.

ಎಲ್‌ಎನ್‌ಜೆಪಿ ಆಸ್ಪತ್ರೆಯ ಅಹಲ್ಯಾಬಾಯಿ ಕಾಲೇಜ್ ಆಫ್ ನರ್ಸಿಂಗ್‌ನಲ್ಲಿ ವಿದ್ಯಾರ್ಥಿನಿಯರಿಗೆ ಕಿರುಕುಳ ಹಾಗೂ ಬಟ್ಟೆಯನ್ನು ಕಳಚಿದ ಆರೋಪದ ಮೇಲೆ ದೂರು ದಾಖಲಾಗಿದೆ. ವಾರ್ಡನ್ ಪರ್ಸ್‌ನಿಂದ ಎಂಟು ಸಾವಿರ ರೂಪಾಯಿ ಕಳವಾಗಿದೆ, ಇಬ್ಬರು ವಿದ್ಯಾರ್ಥಿನಿಯರ ಮೇಲೆ ಅನುಮಾನ ಮೂಡಿದ್ದು, ಅವರನ್ನು ವಿವಸ್ತ್ರಗೊಳಿಸಲಾಗಿದೆ.

ವಿದ್ಯಾರ್ಥಿನಿಯರು ತಮ್ಮ ಪೋಷಕರಿಗೆ ಮಾಹಿತಿ ನೀಡಿದ್ದು, ತಕ್ಷಣವೇ ಹಾಸ್ಟೆಲ್ ಮುಂದೆ ಜಮಾಯಿಸಿದ್ದಾರೆ. ಅವರ ಬಳಿ ಯಾವುದೇ ಹಣ ದೊರಕಿಲ್ಲ. ಕಾಲೇಜು ಆಡಳಿತ ಮಂಡಳಿಗೆ ಪೋಷಕರು ದೂರು ನೀಡಿದ್ದು, ಠಾಣೆಯಲ್ಲಿಯೂ ದೂರು ದಾಖಲಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!