ಹೊಸದಿಗಂತ ವರದಿ ಬೆಳಗಾವಿ:
ಇಲ್ಲಿನ ಗಾಲ್ಫ್ ಮೈದಾನದಲ್ಲಿ ಮರೆಯಾಗಿ ಕುಳಿತಿರುವ ಚಿರತೆ ಸೆರೆ ಹಿಡಿಯಲು ಶಿವಮೊಗ್ಗದ ಜಿಲ್ಲೆಯ ಸಕ್ರೆಬೈಲನಿಂದ ಮಂಗಳವಾರ ತಡರಾತ್ರಿ 2 ಗಂಟೆಗೆ ಮಾವುತರ ಸಮೇತ ಎರಡು ಆನೆಗಳು ಬಂದಿದ್ದು ಇನ್ನೂ ಕೆಲವೇ ಗಂಟೆಯಲ್ಲಿ ಚಿರತೆ ಕಾರ್ಯಾಚರಣೆ ಪ್ರಾರಂಭವಾಗಲಿದೆ.
ವಿಶಾಲವಾದ ಗಾಲ್ಫ್ ಮೈದಾನದಲ್ಲಿ ಮರೆಯಾಗಿರುವ ಚಿರತೆ ಸೆರೆ ಕಾರ್ಯಾಚರಣೆಗೆ ಆಗಮಿಸಿರುವ ಈ ಎರಡೂ ಆನೆಗಳ ಮಾವುತರು ಬಂದ ಬಳಿಕ ಗಾಲ್ಫ್ ಮೈದಾನ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲಿವೆ.
ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ ನಿಂದ ಅರ್ಜುನ ಹಾಗೂ ಆಲೆ ಎಂಬ ಎರಡು ಆನೆಗಳು ಬಂದಿವೆ. ನುರಿತ ವೈದ್ಯರು, ಅರಣ್ಯ ಇಲಾಖೆಯ ಸಹಾಯಕ ಸಿಬ್ಬಂದಿ, ಮಾವುತರು ಸೇರಿದಂತೆ 8 ಜನರ ತಂಡ ಚಿರತೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸಲ್ಲಿದ್ದಾರೆ. ಆನೆಯ ಮೇಲೆ ಮಾವುತರು ಹಾಗೂ ಅರವಳಿಕೆಯ ಮದ್ದು ಹಿಡಿದು ಶಾರ್ಪ್ ಶೂಟರ್ ಗಳು ಗಿಡಗಂಟಿಯಲ್ಲಿ ಇದ್ದ ಚಿರತೆ ಪತ್ತೆ ಹಚ್ಚಲು ತೆರಳಲಿದ್ದಾರೆ.