ಮಧ್ಯಪ್ರದೇಶದ ಅರಣ್ಯದಲ್ಲಿ ಅಪರೂಪದ ಕರಿ ಚಿರತೆ-ವೈರಲ್ ವಿಡಿಯೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಪರೂಪದ ಕಪ್ಪು ಚಿರತೆಯೊಂದು ಮಧ್ಯಪ್ರದೇಶದ ಅರಣ್ಯದಲ್ಲಿ ಕಾಣಿಸಿಕೊಂಡಿದೆ. ಮಧ್ಯಪ್ರದೇಶದ ಪೆಂಚ್ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರ ಕಣ್ಣಿಗೆ ಕಪ್ಪು ಪ್ಯಾಂಥರ್ ಬಿದ್ದಿದ್ದು, ವಿಡಿಯೋ ಮಾಡಿದ್ದಾರೆ. ಇದನ್ನು ಪೆಂಚ್ ಟೈಗರ್ ರಿಸರ್ವ್‌ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಕಾಡುಗಳಲ್ಲಿ ಅಪರೂಪದ ಪ್ರಾಣಿಗಳನ್ನು ನೋಡಲು ತಿಂಗಳುಗಳು ಮತ್ತು ವರ್ಷಗಳು ಬೇಕಾಗುತ್ತದೆ. ವೀಡಿಯೊದಲ್ಲಿ, ಬ್ಲ್ಯಾಕ್ ಪ್ಯಾಂಥರ್ ರಸ್ತೆಯನ್ನು ದಾಟುತ್ತಿರುವುದು ಕಾಣುತ್ತದೆ. ಇದುವರೆಗೆ ಈ ವಿಡಿಯೋವನ್ನು 19 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 1100 ಲೈಕ್‌ಗಳು ಸಿಕ್ಕಿವೆ. ಹಲವರು ತಮ್ಮ ಸಂತಸವನ್ನು ವ್ಯಕ್ತಪಡಿಸಿ ಕಾಮೆಂಟ್ ಕೂಡ ಮಾಡಿದ್ದಾರೆ. ಆ ಕಪ್ಪು ಪ್ಯಾಂಥರ್ ಅನ್ನು ಒಮ್ಮೆ ನೋಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!